ಉಪ್ಪಾರ ಸಮುದಾಯ ಎಸ್ಸಿ, ಎಸ್ಟಿಗೆ ಸೇರಿಸಿ

20Ravig6
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗುರುವಾರ ರಾಜ್ಯ ಉಪ್ಪಾರ ಮಹಾಸಭಾ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. ವಿಷ್ಣು ಲಾತೂರ, ಮಂಜುನಾಥ ರಾಜಪ್ಪನವರ, ಎನ್.ಆರ್.ಲಾತೂರ, ಲಕ್ಕಪ್ಪ ಕರಲಿಂಗಪ್ಪಗೋಳ, ಕಲ್ಲಪ್ಪ ಗ್ಯಾಣಪ್ಪನವರ, ಲಕ್ಷ್ಮೀ ಗೋಟೂರ, ರೇಖಾ ಲಕ್ಕುಂಡಿ, ಶಾಂತಾ ತಿಗಡಿ ಇತರರಿದ್ದರು.
Published on

ಬೆಳಗಾವಿ: ಉಪ್ಪಾರ ಸಮುದಾಯವನ್ನು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ರಾಜ್ಯ ಉಪ್ಪಾರ ಮಹಾಸಭಾ ನೇತೃತ್ವದಲ್ಲಿ ಉಪ್ಪಾರ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಲಾಯಿತು. ರಾಜ್ಯದಲ್ಲಿ ಉಪ್ಪಾರ ಸಮಾಜದ 50 ಲಕ್ಷಕ್ಕೂ ಅಕ ಜನರಿದ್ದಾರೆ.

ಉಪ್ಪಾರ ಸಮಾಜವು ಶ್ರಮಿಕ ಹಾಗೂ ಹಿಂದುಳಿದ ಸಮಾಜವಾಗಿದ್ದು, ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿಸುವ ಹಲವು ಹೋರಾಟಗಳು ನಡೆದರೂ ಯಾವುದೇ ಪ್ರಯೋಜನ ಆಗಿಲ್ಲ. 2006ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರದ ಅವಯಲ್ಲಿ ಉಪ್ಪಾರ ಸಮುದಾಯವನ್ನು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಾರಸು ಸಲ್ಲಿಸುವುದಾಗಿ ನೀಡಿದ್ದ ಭರವಸೆಯೂ ಭರವಸೆಯಾಗಿಯೇ ಉಳಿದಿದೆ. ಅಲ್ಲದೇ ಸಿದ್ದರಾಮಯ್ಯ ಅವರ ಅವಯಲ್ಲಿ ನೀಡಿದ ಭರವಸೆಯು ಈವರೆಗೂ ಈಡೇರಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗಗಳ ಆಯೋಗಗಳಾದ ನ್ಯಾ.ಹಾವನೂರ ಆಯೋಗ, ನ್ಯಾ.ವೆಂಕಟಸ್ವಾಮಿ ಆಯೋಗ, ನ್ಯಾ. ಚಿನ್ನಪ್ಪ ರೆಡ್ಡಿ ಆಯೋಗದ ವರದಿಗಳಲ್ಲಿ ಉಪ್ಪಾರ ಸಮುದಾಯವನ್ನು ಪರಿಶಿಷ್ಟ ಜಾತಿ, ಪಂಗಡಗಳ ರೀತಿ ಹಿಂದುಳಿದಿದೆ. ಈ ಸಮುದಾಯಕ್ಕೆ ಮೀಸಲಾತಿ ನೀಡಿ ಮುಖ್ಯವಾಹಿನಿಗೆ ತರಬೇಕು ಎಂದು ತಿಳಿಸಿದ್ದಾರೆ. ಆದರೆ, ಈವರೆಗೂ ಯಾವುದೇ ಸರ್ಕಾರ ಮಾಡಿಲ್ಲ. ಉಪಜಾತಿಗಳಾದ ಕೂಸುರು, ಮಂಡಾಲರು, ಭಟದಾ ಮತ್ತು ಮಹರಾ ಜಾತಿಗಳನ್ನು ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಮಾಡಿದೆ. ಆದರೆ ಉಪ್ಪಾರ ಸಮುದಾಯವನ್ನು ಮಾತ್ರ ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿಸದಿರುವುದು ದುರದೃಷ್ಟಕರ ಸಂಗತಿ. ಸರ್ಕಾರ ಕೂಡಲೇ ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿಸಬೇಕು ಎಂದು ಪ್ರತಿಭಟನಾಕಾರರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ರಾಜ್ಯ ಉಪ್ಪಾರ ಮಹಾಸಭಾದ ರಾಜ್ಯಾಧ್ಯಕ್ಷ ವಿಷ್ಣು ಲಾತೂರ, ಜಿಲ್ಲಾಧ್ಯಕ್ಷ ಮಂಜುನಾಥ ರಾಜಪ್ಪನವರ, ವಕೀಲ ಎನ್.ಆರ್.ಲಾತೂರ, ಲಕ್ಕಪ್ಪ ಕರಲಿಂಗಪ್ಪಗೋಳ, ಕಲ್ಲಪ್ಪ ಗ್ಯಾಣಪ್ಪನವರ, ಲಕ್ಷ್ಮೀ ಗೋಟೂರ, ರೇಖಾ ಲಕ್ಕುಂಡಿ, ಶಾಂತಾ ತಿಗಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net