

ಕಲಬುರಗಿ: ಜಿಲ್ಲಾ ಉಪ್ಪಾರ ಸಂಘದ ಪದಾಧಿಕಾರಿಗಳ ನಿರ್ದೇಶಕರ ಹಾಗೂ ಜಿ¯್ಲೆಯ ಸಮಾಜದ ಬಂಧುಗಳ ಸಾಮಾನ್ಯ ಸಭೆ ನಗರದ ಮಕ್ತಂಪುರದ ಉಪ್ಪಾರ ಓಣಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ಸೆ.೧ರಂದು ಬೆಳಗ್ಗೆ ೧೧ಕ್ಕೆ ಹಮ್ಮಿಕೊಳ್ಳಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಮಹಾದೇವಪ್ಪ ಉಪ್ಪಾರ ತಿಳಿಸಿದರು. ಸಭೆಯಲ್ಲಿ ಯುವಕರನ್ನು ಪ್ರೋತ್ಸಾಹಿಸಿ, ಜಿಲ್ಲಾ ಉಪ್ಪಾರ ಸಂಘವನ್ನು ಪುನರ್ ರಚಿಸುವುದು, ಸಂಘದ ಇದುವರೆಗಿನ ಖರ್ಚು ವೆಚ್ಚದ ಲೆಕ್ಕಪತ್ರ ಮಂಡಿಸುವುದು, ಜಿಲ್ಲಾ ಉಸ್ತುವಾರಿ ಸಚಿವರೊಡನೆ ಚರ್ಚಿಸಿದಂತೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎ ಸೈಟ್ ಖರೀದಿಸುವ ಕುರಿತು, ಜಿಲ್ಲಾ ಸಂಘದ ನೋಂದಣಿ ನವೀಕರಿಸುವ ಕುರಿತು ಚರ್ಚಿಸಿ ನಿರ್ಣಯಿಸಲಾಗುವುದು. ಪದಾಧಿಕಾರಿಗಳು ಹಾಗೂ ಸಮಾಜದ ಎಲ್ಲ ಬಂಧುಗಳು ಪಾಲ್ಗೊಳ್ಳಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವೆಂಕಟೇಶ ನೀರಡಗಿ, ನರಸಪ್ಪ ಆರ್., ಅಶೋಕ ಎಸ್ ಇತರರಿದ್ದರು.