

ಗೋಕಾಕ: ಉಪ್ಪಾರ ಸಮಾಜವನ್ನು ಎಸ್ಟಿಗೆ ಸೇರಿಸುವಂತೆ ಒತ್ತಾಯಿಸಿ ಅ. 13ರಂದು ಪ್ರತಿಭಟನೆ ಮೂಲಕ ಸರ್ಕಾರ ಎಚ್ಚರಿಸಲು ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದು ಗೋಕಾಕ ತಾಲೂಕು ಉಪ್ಪಾರ ಸಂದ ಅಧ್ಯಕ್ಷ ಶಿವಪುತ್ರ ಜಕಬಾಳ ಹೇಳಿದರು.
ನಗರದ ಉಪ್ಪಾರ ಗಲ್ಲಿಯ ಉಪ್ಪಾರ (ಲೇಪಾ) ಕಲ್ಯಾಣ ಮಂಟಪದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಉಪ್ಪಾರ ಸಮಾಜ ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿದ್ದು ಸರ್ಕಾರ ಕುಲಶಾಸಿಯ ಅಧ್ಯಯನ ಪರಿಶೀಲಿಸಿ ಎಸ್ಟಿಗೆ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು.
ಎಸ್ಸಿ, ಎಸ್ಟಿಗಿಂತಲೂ ಹಿಂದುಳಿದ ಉಪ್ಪಾರ ಸಮಾಜವನ್ನು ಪ್ರವರ್ಗದಲ್ಲಿ ಸೇರಿಸಲಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸಿರುವ ಎಲ್ಲ ಸರ್ಕಾರಗಳು ಉಪ್ಪಾರ ಸಮಾಜಕ್ಕೆ ಸೂಕ್ತ ಮೀಸಲಾತಿ ಸ್ಥಾನಮಾನ ನೀಡಲು ಮುಂದೆ ಬಂದಿಲ್ಲ. ಅದಕ್ಕಾಗಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕೂಡಲೇ ಎಸ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಲು ಪ್ರತಿಭಟಿಲಾಗುವುದು ಎಂದರು.
ಗೋಕಾಕ ತಾಲೂಕ ಉಪ್ಪಾರ ಸಂದ ಉಪಾಧ್ಯಕ್ಷ ಕುಶಾಲ ಗುಡೆನ್ನವರ, ಅಡಿವೆಪ್ಪ ಕಿತ್ತೂರ, ಕಾರ್ಯದರ್ಶಿ ವಿಠ್ಠಲ ಮೆಳವಂಕಿ, ಯಲ್ಲಪ್ಪ ದುರದುಂಡಿ, ನಗರಸಭೆ ಸದಸ್ಯ ಭಗವಂತ ಹುಳ್ಳಿ, ಎಸ್.ಎಂ.ಹತ್ತಿಕಟಗಿ, ವಿಠ್ಠಲ ಸವದತ್ತಿ, ಪರಸಪ್ಪ ಚೂನನ್ನವರ, ನಿಂಗಪ್ಪ ಮಾಳ್ಯಾಗೋಳ, ಯಲ್ಲಪ್ಪ ಸುಳ್ಳನವರ, ಅಶೋಕ ಗೋಣಿ, ಲಕ್ಷ$್ಮಣ ಖಡಕಬಾಬಿ, ಮಾಯಪ್ಪ ತಹಸೀಲ್ದಾರ್, ಬಸವರಾಜ ಖಾನಪ್ಪನವರ, ವೈ.ಎಲ್.ಹೆಜ್ಜೆಗಾರ, ಮಲ್ಲಿಕಾರ್ಜುನ ಚೌಕಾಶಿ, ಭೀಮಶಿ ಭರಮನ್ನವರ, ಸದಾಶಿವ ಗುದಗಗೋಳ, ಮುತ್ತೆಪ್ಪ ಕುಳ್ಳೂರ, ಗಂಗಾಧರ ಭಟ್ಟಿ, ಶಂಕರ ಪಾಟೀಲ, ಭೀಮಶಿ ಮಾಳ್ಯಾಗೋಳ, ಸತ್ತೆಪ್ಪ ಬಬಲಿ, ದಶರಥ ಮದಲಬಾವಿ, ಯಲ್ಲಪ್ಪ ಬೂದಿಗೊಪ್ಪ ಇತರರಿದ್ದರು.