

ಚಿಕ್ಕಮಗಳೂರು: ವೈದ್ಯರ ಪ್ರೀತಿಯ ಮಾತಿಗೆ ರೋಗಿಯ ಅರ್ಧ ಕಾಯಿಲೆ ಗುಣಮುಖವಾಗವ ಶಕ್ತಿಯಿದೆ. ಈ ನಿಟ್ಟಿನಲ್ಲಿ ನಮ್ಮ ಕ್ಲಿನಿಕ್ ನಲ್ಲಿ ವೈದ್ಯ ಸಿಬ್ಬಂದಿಯಿAದ ಉತ್ತಮ ಸೇವೆ ದೊರೆಯುವಂತಾಗಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ನಗರದ ಉಪ್ಪಳ್ಳಿ ಬಡಾವಣೆಯಲ್ಲಿ ಮೂರನೇ ನಮ್ಮ ಕ್ಲಿನಿಕ್‌ನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಬಂದ ನಂತರ ಜನರ ಬದುಕು ಮತ್ತು ಕಷ್ಟ ನಿವಾರಿಸಲು ಮೊದಲ ಆದ್ಯತೆ ನೀಡಿ ನಂತರ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ವೈದ್ಯೋ ನಾರಾಯಣ ಹರಿ ಎಂಬ ಮಾತಿನಂತೆ ವೈದ್ಯರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಯಾರಾದರೂ ರೋಗಿ ಚಿಕಿತ್ಸೆ ಪಡೆಯಲು ಬಂದರೆ ನಗುನಗುತ್ತಾ ಮಾತನಾಡಿಸಿ ಸೂಕ್ತ ಚಿಕಿತ್ಸೆ ಕೊಡಬೇಕು. ವೈದ್ಯರ ಪ್ರೀತಿಯ ಮಾತಿಗೆ ರೋಗಿಯ ಕಾಯಿಲೆ ಅರ್ಧ ಗುಣಮುಖವಾಗುವ ಶಕ್ತಿಯಿದೆ. ಜನರ ಆಶೋತ್ತರಗಳಿಗೆ ತಕ್ಕಂತೆ ನಡೆದುಕೊಂಡು ಇಲ್ಲಿಂದ ವರ್ಗಾವಣೆಯಾಗಿ ಹೋದರೂ ಜನ ಮತ್ತೆ ಮತ್ತೆ ವೈದ್ಯರನ್ನು ನೆನಪಿಸಿಕೊಳ್ಳುವಂತೆ ಕಾರ್ಯನಿರ್ವಹಿಸಿ ಎಂದು ವೈದ್ಯರಿಗೆ ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಕಾರಿ ಡಾ.ಅಶ್ವತ್‌ಬಾಬು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು ೧೨ ನಮ್ಮ ಕ್ಲಿನಿಕ್‌ಗಳಿವೆ. ಅದರಲ್ಲಿ ೪ ನಮ್ಮ ಚಿಕ್ಕಮಗಳೂರಿನ ನಗರದಲ್ಲೇ ಮಂಜೂರಾಗಿವೆ. ಒಂದು ನರಿಗುಡ್ಡನಹಳ್ಳಿ ವೃತ್ತ, ಕೆಂಪನಹಳ್ಳಿ, ಮೂರನೆಯದು ಉಪ್ಪಳ್ಳಿಯಲ್ಲಿ ಪ್ರಾರಂಭವಾಗುತ್ತಿದೆ. ಇನ್ನೊಂದು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪ ಮಾಡಬೇಕು ಎಂಬ ಉz್ದೆÃಶ ಇಟ್ಟುಕೊಂಡಿz್ದÉÃವೆ. ಈ ಬಗ್ಗೆ ಶಾಸಕರೊಂದಿಗೆ ಚರ್ಚಿಸಿ ೪ನೇ ನಮ್ಮ ಕ್ಲಿನಿಕ್‌ನ್ನು ತೆರೆಯಲಿz್ದÉÃವೆ ಎಂದು ಹೇಳಿದರು.
ನಗರದಲ್ಲಿ ೨ ನಗರ ಆರೋಗ್ಯ ಕೇಂದ್ರ ಮತ್ತು ೪ ನಮ್ಮ ಕ್ಲಿನಿಕ್‌ಗಳಿವೆ. ಸಾರ್ವಜನಿಕರಿಗೆ ತಮ್ಮ ಮನೆಯ ಬಳಿಯಲ್ಲೇ ಚಿಕಿತ್ಸೆ ಸಿಗಬೇಕು. ಶೀತ, ಕೆಮ್ಮು, ಜ್ವರ ಮತ್ತಿತರೆ ಸಣ್ಣ ಪುಟ್ಟ ಸಮಸ್ಯೆಗಳಿಗೆ ದೊಡ್ಡಾಸ್ಪತ್ರೆಗೆ ಹೋಗುವುದನ್ನು ತಪ್ಪಿಸಲು ಸರ್ಕಾರ ಈ ಯೋಜನೆ ರೂಪಿಸಿದೆ. ಬೆಳಗ್ಗೆ ೯.೩೦ ರಿಂದ ೪.೩೦ವರೆಗೆ ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತವೆ. ವೈದ್ಯ ಸಿಬ್ಬಂದಿ ಇರುತ್ತಾರೆ. ಪ್ರತಿದಿನವೂ ಕ್ಲಿನಿಕ್ ತೆರೆದಿರುತ್ತದೆ. ಇಲ್ಲಿ ಎಲ್ಲ ತರಹದ ಬೇಸಿಕ್ ಪ್ರಯೋಗಗಳು ಉಚಿತವಾಗಿ ದೊರೆಯುತ್ತದೆ. ಬಿಪಿ, ಶುಗರ್, ರಕ್ತ ಪರೀಕ್ಷೆ ಉಚಿತವಾಗಿ ಮಾಡಲಾಗುತ್ತದೆ. ಅಗತ್ಯವಿದ್ದಲ್ಲಿ ಉನ್ನತ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ನಮ್ಮ ಕ್ಲಿನಿಕ್ ಉದ್ಘಾಟನೆಯಾಗಿರುವುದು ಸಂತೋಷದ ವಿಚಾರ. ಈ ಭಾಗದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರೇ ಇದ್ದು ಆಸ್ಪತ್ರೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಸಿಡಿಎ ಅಧ್ಯಕ್ಷ ನಯಾಜ್ ಅಹಮದ್, ಸ್ಥಳೀಯ ನಗರಸಭೆ ಸದಸ್ಯರು, ವೈದ್ಯ, ಸಿಬ್ಬಂದಿ ಉಪಸ್ಥಿತರಿದ್ದರು.