

ಕೊಳ್ಳೇಗಾಲ: ನಟ ಉಪೇಂದ್ರ ಬಂಧನಕ್ಕೆ ಆಗ್ರಹಿಸಿ ಆದಿ ದ್ರಾವಿಡ ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟ ಶುಕ್ರವಾರ 9 ದಿನ ಪೂರೈಸಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಹೊಸ ಹಂಪಾಪುರ ಗ್ರಾಮಸ್ಥರು ಅಕ್ರೋಶ ಹೊರಹಾಕಿದ್ದಾರೆ.
ನೂರಾರು ಪ್ರತಿಭಟನಾಕಾರರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ತಮಟೆ ಬಡಿಯುತ್ತ ಉಪೇಂದ್ರ ವಿರುದ್ಧ ಧಿಕ್ಕಾರ ಕೂಗುತ್ತ ತಾಲೂಕು ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು.
ಹಂಪಾಪುರ ಗ್ರಾಮದ ಶಾಂತರಾಜು ಮಾತನಾಡಿ, ದಲಿತರ ಮೇಲೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಉಪೇಂದ್ರ ಬಂಧಿಸಲೇಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಡೆಯುತ್ತದೆ. ಉಪೇಂದ್ರನ ಬಂಧನವಾದರೆ ಮಾತ್ರ ದಲಿತರ ನೋವಿಗೆ ಸ್ವಲ್ಪವಾದರೂ ಶಾಂತಿ ಸಿಗುತ್ತದೆ ಎಂದು ಹೇಳಿದರು.
ಹೊಸ ಹಂಪಾಪುರದ ಗ್ರಾಮದ ಯಜಮಾನರಾದ ಸಿ.ನಾಗರಾಜು, ರಂಗಯ್ಯ, ರವಿರಾಜು, ಮಾದೇಶ್, ಬಿಳಿಗಿರಿ, ಮಲ್ಲರಾಜು, ಶಂಕರ್, ಶಿವರುದ್ರ, ಲಿಂಗರಾಜು, ಮಲ್ಲೇಶ್, ಮಾದೇವ, ಮಲ್ಲಯ್ಯ, ಗಣೇಶ, ನಂಜುಂಡ, ಮಲ್ಲನಿಂಗ, ಸಿದ್ದನಂಜಯ್ಯ, ರಾಜಶೇಖರ್, ಪ್ರಕಾಶ್ , ಆದಿ ದ್ರಾವಿಡ ಹೋರಾಟ ಸಮಿತಿಯ ಅಣಗಳ್ಳಿ ಬಸವರಾಜು, ಸುರೇಶ್ ಇತರರಿದ್ದರು.