

ಚಾಮರಾಜನಗರ: ತಾಲೂಕಿನ ಪುಣಜನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ದೊಡ್ಡ ಮೂಡಳ್ಳಿ ಗ್ರಾಮದ ಗಂಗಾ ಶಂಕರ್ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಗಂಗಾ ಶಂಕರ್ ಅವರನ್ನು ಹೊರತು ಪಡಿಸಿ ಯಾರು ನಾಮಪತ್ರ ಸಲ್ಲಿಸದ ಪ್ರಯುಕ್ತ ಗಂಗಾ ಅವರನ್ನು ಉಪಾಧ್ಯಕ್ಷರೆಂದು ಚುನಾವಣಾ ಅಧಿಕಾರಿ ಹೇಮಂತ್ ಕುಮಾರ್ ಘೋಷಿಸಿದರು.
ಈ ಸಂದರ್ಭದಲ್ಲಿ ಪಿಎಸಿಸಿ ಸಂಘದ ಅಧ್ಯಕ್ಷ ಮುತ್ತು ನಾಯ್ಕ, ಸದಸ್ಯರಾದ ಪಿ.ನಾಗನಾಯ್ಕ, ಪಿ.ಕುಮಾರ್ ನಾಯಕ, ಪಿ.ಗಣೇಶ್ ನಾಯಕ, ಎನ್.ಕೃಷ್ಣ, ಬೊಮ್ಮಮ್ಮ, ಗುರುನಾಯಕ, ಸಿ.ಪ್ರವೀಣ್ ನಾಯಕ, ಪುಟ್ಟಸ್ವಾಮಿ ಗೌಡ, ಜಯಬಾಯಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಜಯಶಂಕರ ಹಾಗೂ ಹಾಜರಿದ್ದರು.