ಉಪವಿಭಾಗಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ

WEB5
ಬೈಲಹೊಂಗಲ ಹರಳಯ್ಯ ಕಾಲನಿ ನಿವಾಸಿಗಳು ಮನೆಗಳ ಉತಾರಗಳಲ್ಲಿ ನಿವಾಸಿಗಳ ಹೆಸರು ದಾಖಲಿಸಬೇಕೆಂದು ಧರಣಿ ಸತ್ಯಾಗ್ರಹ ನಡೆಸಿದ ಸ್ಥಳಕ್ಕೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಭೇಟಿ ನೀಡಿದರು. ಪರಶುರಾಮ ರಾಯಬಾಗ, ಮಾರುತಿ ಕೊಂಡೂರ, ಸುನೀಲ ಹಲಗಿ, ರಾಮು ಕಳಮಕರ ಇತರರು ಇದ್ದರು.
Published on

ಬೈಲಹೊಂಗಲ: ಪಟ್ಟಣದ ಹರಳಯ್ಯ ಕಾಲನಿ ನಿವಾಸಿಗಳ ಮನೆಗಳ ಉತಾರಗಳಲ್ಲಿ ಪುರಸಭೆಯ ಮಾಲೀಕತ್ವ ಕಡಿಮೆ ಮಾಡಿ, ಅನುಭೋಗದಾರರಾದ ನಿವಾಸಿಗಳ ಹೆಸರು ದಾಖಲಿಸಬೇಕು ಹಾಗೂ ಹಕ್ಕು ಪತ್ರ ವಿತರಿಸುವಂತೆ ಒತ್ತಾಯಿಸಿದ ನಿವಾಸಿಗಳು ಎಸಿ ಕಚೇರಿ ಎದುರು ಬುಧವಾರದಿಂದ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಕರ್ನಾಟಕ ಅಂಬೇಡ್ಕರ್ ಯುವ ಸೇನೆ ರಾಜ್ಯ ಉಪಾಧ್ಯಕ್ಷ ಪರಶುರಾಮ ರಾಯಬಾಗ ಮಾತನಾಡಿ, ಅನೇಕ ವರ್ಷಗಳಿಂದ ನ್ಯಾಯ ಒದಗಿಸುವಂತೆ ಒತ್ತಾಯಿಸಿದರೂ ಕೊಳೆಗೇರಿ ಅಭಿವದ್ಧಿ ನಿಗಮದ ಅಧಿಕಾರಿಗಳು, ಶಾಸಕರು ನಿರ್ಲಕ್ಷಿಸುತ್ತಿದ್ದಾರೆ. ನ್ಯಾಯ ಸಿಗುವವರೆಗೆ ಧರಣಿ ಮುಂದುವರಿಸುತ್ತೇವೆ. ನಮ್ಮ ಪ್ರಾಣಕ್ಕೆ ಆಪತ್ತು ಬಂದರೆ ಅಧಿಕಾರಿಗಳು, ಶಾಸಕರೇ ಹೊಣೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ಅಂಬೇಡ್ಕರ್ ಯುವ ಸೇನೆಯ ರಾಜ್ಯಾಧ್ಯಕ್ಷ ಮಂಜುನಾಥ ಚಿಕ್ಕನ್ನವರ, ನಾಯಕಿ ಚಂದ್ರಿಕಾ ಕಳಮಕರ ಮಾತನಾಡಿ, ಶಾಸಕರು, ಅಧಿಕಾರಗಳು ಮನವಿ ನೀಡಿದರೂ ಸ್ಪಂದಿಸುತ್ತಿಲ್ಲ. ಆದ್ದರಿಂದ ನ್ಯಾಯ ಸಿಗುವವರೆಗೆ ಹೋರಾಟ ಮಾಡುತ್ತೇವೆ ಎಂದರು.

ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಧರಣಿಗೆ ಬೆಂಬಲ ವ್ಯಕ್ತಪಡಿಸಿ, ಕೊಳೆಗೇರಿ ಅಭಿವದ್ಧಿ ನಿಗಮದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿದರು. ಗುರುವಾರ ನೀವೇ ಖುದ್ದಾಗಿ ಬಂದು ಅವರ ಮನೆಗಳ ಹಕ್ಕು ಪತ್ರದ ವ್ಯವಸ್ಥೆ ಮಾಡಬೇಕೆಂದು ತಿಳಿಸಿದರು. ಪುರಸಭೆಯಲ್ಲಿ ಠರಾವು ಮಾಡಿ, ಹಕ್ಕು ಪತ್ರ ವಿತರಿಸಲು ಕೊಳೆಗೇರಿ ಅಭಿವದ್ಧಿ ನಿಗಮಕ್ಕೆ ಕಳಿಸಲಾಗಿದೆ. ನಿವಾಸಿಗಳು ಎಲ್ಲ ಕಾಗದ ಪತ್ರಗಳನ್ನು ನೀಡಿದ ನಂತರ ಮುಂದಿನ ಕ್ರಮ ಜರುಗಲಿದೆ. ನ್ಯಾಯ ಸಿಗುವವರೆಗೆ ನಿಮ್ಮ ಜತೆಗೆ ಇರುವೆ ಎಂದರು.

ಮಾರುತಿ ಕೊಂಡೂರ, ಸುನೀಲ ಹಲಗಿ, ರಾಮು ಕಳಮಕರ, ಶಿವಾನಂದ ದಳವಾಯಿ, ರಫೀಕ್ ಅನ್ಸಾರಿ, ವಿನೋದ ಸವದತ್ತಿ, ಭರಮಪ್ಪ ತೋರಗಲ, ಉಮೇಶ ದೊಎಮನಿ, ರಿಯಾಜ್ ಅನ್ಸಾರಿ, ಖುರ್ಷಿದಾಬಾನು ಸಯ್ಯದ್, ಯಲ್ಲವ್ವ ಭಜಂತ್ರಿ, ಪಾರ್ವತಿ ಮಹಿಮನಾರ, ಶಾರದಾ ಕಿತ್ತೂರ, ಕರುಣಾ ಅಗಾಸಿ, ಮೆಹಬೂಬಿ ಸಯ್ಯದ್, ಮಮ್ತಾಜ್ ನಿಬಂಧ, ಈರಮ್ಮ ದಳವಾಯಿ, ತುಳಸಾಬಾಯಿ ರಾಯಬಾಗ, ಮಕ್ತುಮಬಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net