ಉಪವಿಭಾಗ ಆಸ್ಪತ್ರೆಗೆ  ರಾಜ್ಯ ಮಕ್ಕಳ ಆಯೋಗದ ಸದಸ್ಯರ ಭೇಟಿ

28-kgl-1,,
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.43231517, 0.5977605);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 43;
Published on

ಗರ್ಭಿಣಿ, ಬಾಣಂತಿಯರ ಯೋಗಕ್ಷೇಮ ವಿಚಾರಣೆ

 ಕೊಳ್ಳೇಗಾಲ : ಕೊಳ್ಳೇಗಾಲ ಪಟ್ಟಣದ ಉಪವಿಭಾಗ ಆಸ್ಪತ್ರೆ ಮತ್ತು ಪಟ್ಟಣ ಪೊಲೀಸ್ ಠಾಣೆಗೆ ಸೋಮವಾರ ಕರ್ನಾಟಕ ರಾಜ್ಯ ಮಕ್ಕಳ ಆಯೋಗದ ಸದಸ್ಯ ವೆಂಕಟೇಶ್, ಡಾ.ಕೆ.ಟಿ.ತಿಪ್ಪೇಸ್ವಾಮಿ ಹಾಗೂ ಶಶಿಧರ್ ಕೋಸುಂಬೆ ಭೇಟಿ ನೀಡಿ ಪರಿಶೀಲಿಸಿದರು.

ಆಸ್ಪತ್ರೆಯ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಸದಸ್ಯರು ಭೇಟಿ ನೀಡಿ ಗರ್ಭಿಣಿಯರು, ಬಾಣಂತಿಯರು, ಮಕ್ಕಳ ಯೋಗಕ್ಷೇಮ ವಿಚಾರಿಸಿದರು. ಮಕ್ಕಳ ಪೌಷ್ಟಿಕ ಪುನಶ್ಚೇತನ ಕೇಂದ್ರಕ್ಕೆ ಭೇಟಿ ನೀಡಿ ದಾಖಲಾತಿ ಪರಿಶೀಲಿಸಿದರು. ಅಪೌಷ್ಟಿಕತೆಗೊಳಗಾದ ಮಕ್ಕಳ ಆರೈಕೆ ಹೇಗೆ ಸಾಗಿದೆ ಎಂಬ ಬಗ್ಗೆ ಮಕ್ಕಳ ವ್ಯೆದ್ಯರು, ಟಿಎಚ್‌ಒ ಗೋಪಾಲ್ ಅವರಿಂದ ಮಾಹಿತಿ ಪಡೆದರು.

ಪೌಷ್ಟಿಕ ಪುನಶ್ಚೇತನ ಕೇಂದ್ರ 5 ಹಾಸಿಗೆ ಸಾಮರ್ಥ್ಯ ಹೊಂದಿದೆ. ಆದರೆ, ಒಂದು ಮಗು ಮಾತ್ರ ದಾಖಲಾಗಿದೆ. ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಅವರು ಏಕೆ ದಾಖಲು ಆಗುತ್ತಿಲ್ಲ ಎಂದು ಸದಸ್ಯ ವೆಂಕಟೇಶ್ ಪ್ರಶ್ನಿಸಿದರು. ಈ ಕೊಠಡಿಯಲ್ಲಿ 5 ಹಾಸಿಗೆಗೆ ಸ್ಥಳದ ಸಮಸ್ಯೆ ಇದೆ. ಇದನ್ನು ಬೇರೆಡೆ ಸ್ಥಳಾಂತರ ಮಾಡಿ ಎಂದು ಸೂಚನೆ ನೀಡಿದರು.

ಮೆನು ನಿರ್ವಹಣೆ ಇಲ್ಲ: ಆಸ್ಪತ್ರೆಯಲ್ಲಿ ಪೌಷ್ಟಿಕ ಪುನಶ್ಚೇತನ ಕೇಂದ್ರಕ್ಕೆ ದಾಖಲಾದ ಮಕ್ಕಳಿಗೆ ನೀಡುವ ಊಟ ನೀಡಲಾಗುತ್ತಿರುವ ಎಂಬ ಬಗ್ಗೆ ಸದಸ್ಯರು ಪರಿಶೀಲಿಸಿದರು. ಅಡುಗೆ ಮನೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿ ಬಳಿ ಈ ಬಗ್ಗೆ ಮಾಹಿತಿ ಪಡೆದರು. ಅಲ್ಲಿಯೇ ಇದ್ದ ಮಕ್ಕಳ ವ್ಯೆದ್ಯರನ್ನು ಪ್ರಶ್ನೆ ಮಾಡಿ, ಅಪೌಷ್ಟಿಕತೆಯಿಂದ ಬಳಲಿರುವ ಮಕ್ಕಳಿಗೆ ಏನೇನು ಆಹಾರ ನೀಡುತ್ತ ಇದ್ದೀರಿ ಎಂದು ಪ್ರಶ್ನಿಸಿದರು. ಅಡುಗೆ ಸಿಬ್ಬಂದಿ-ವೈದ್ಯರು ನೀಡಿದ ಪ್ರತಿಕ್ರಿಯೆಗಳು ಹೊಂದಾಣಿಕೆ ಆಗದ ಕಾರಣ ಮೆನು ಪ್ರಕಾರ ಮಕ್ಕಳಿಗೆ ಆಹಾರ ನೀಡುತ್ತಿಲ್ಲ ಎಂದು ಸದಸ್ಯ ಶಶಿಧರ್ ಕೋಸುಂಬೆ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಮಕ್ಕಳ ಒಳ ರೋಗಿಗಳ ವಿಭಾಗ, ನವಜಾತ ಶಿಶು ವಿಭಾಗ, ಆಟದ ಕೊಠಡಿ ಮತ್ತು ಸಮಾಲೋಚನಾ ಕೊಠಡಿಗೆ ಭೇಟಿ ನೀಡಿ ವೀಕ್ಷಿಸಿದರು.

ಅಪ್ರಾಪ್ತ ಗರ್ಭಿಣಿಯರ ಬಗ್ಗೆ ನಿಗಾ ವಹಿಸಿ:

ಆಸ್ಪತ್ರೆಗೆ 18 ವರ್ಷದೊಳಗಿನ ಗರ್ಭಿಣಿಯರು ಹೆರಿಗೆಗೆ ಬಂದರೆ ಕೂಡಲೆ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿ. ಪೊಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ಎಂದು ಸದಸ್ಯ ಡಾ.ಕೆ.ಟಿ. ತಿಪ್ಪೇಸ್ವಾಮಿ ಸೂಚನೆ ನೀಡಿದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾಜಶೇಖರ್ ಈ ಬಗ್ಗೆ ಪ್ರತಿಕ್ರಿಯಿಸಿ, 4 ತಿಂಗಳ ಹಿಂದೆ ಒಂದು ಪ್ರಕರಣ ಬೆಳಕಿಗೆ ಬಂದಿತ್ತು. ಆ ಬಗ್ಗೆ ಎಫ್‌ಐಆರ್ ದಾಖಲಿಸಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net