

ಕಲಬುರಗಿ: ಜಿಲ್ಲೆಯಾದ್ಯಂತ ನಡೆಯುತ್ತಿರುವ ಮದ್ಯ, ಗಾಂಜಾ, ಕೊರೆಕ್ಸ್, ಕಳ್ಳಬಟ್ಟಿ ಸರಾಯಿ ಸೇರಿ ನಶೆ ಪದಾರ್ಥಗಳನ್ನು ಅಕ್ರಮವಾಗಿ ಮಾರಾಟ ತಡೆಯಲು ಆಗ್ರಹಿಸಿ ಆ.೧೫ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಸಮೃದ್ಧಿ ಕರ್ನಾಟಕ ಜನಪರ ಸಮಿತಿ ಸಂಘಟನೆ ಅಧ್ಯP್ಷÀ ಸುಭಾಷ ಬಿದನೂರ ಹೇಳಿದರು. ಗ್ರಾಮೀಣ ಭಾಗದಲ್ಲಿ ಸಣ್ಣ ಸಣ್ಣ ಪಾನ್ ಅಂಗಡಿ, ಕಿರಾಣಿ ಅಂಗಡಿ, ದಾಬಾಗಳಲ್ಲಿ ಮದ್ಯ ಅಕ್ರಮವಾಗಿ ಮಾರುತ್ತಿದ್ದಾರೆ. ಈ ಬಗ್ಗೆ ಗಮನಕ್ಕಿದ್ದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಅದನ್ನು ತಡೆಯಲು ಆಗ್ರಹಿಸಿ ಧರಣಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲಾಧ್ಯP್ಷÀ ಗುರುಸ್ವಾಮಿ ಹಿರೇಮಠ, ಮುಖಂಡರಾದ ಎಂ.ಡಿ.ನವಾಜ್, ನಿಂಗಣ್ಣ ಉದನೂರ, ರಾಜಕುಮಾರ ಮಂಗಲಗಿ, ಮಲ್ಲು ಗಾಜೀಪುರ, ಬಾಲಕೃಷ್ಣ ÀÄಲೆ ಇತರರಿದ್ದರು.