ಉಪರಾಷ್ಟ್ರಪತಿಗೆ ಅಣಕು ಅಪಮಾನ

CTD 21 BJP STIRKE--06
Published on

ಚಿತ್ರದುರ್ಗ: ಕಾಂಗ್ರೆಸ್ ಮತ್ತು ಟಿಎಂಸಿ ಸಂಸದರು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಅಣಕಿಸುವ ವಿಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ ಎಂದು ಆರೋಪಿಸಿ, ಬಿಜೆಪಿ ಕಾರ‌್ಯಕರ್ತರು ಗುರುವಾರ ನಗರದ ಒನಕೆ ಓಬವ್ವ ವೃತ್ತದಲ್ಲಿ ವಿರುದ್ಧ ಪ್ರತಿಭಟನೆ ನಡೆಸಿದರು.
ಪಕ್ಷದ ಜಿಲ್ಲಾ ಮಾಜಿ ಕಾರ‌್ಯದರ್ಶಿ ಕೆ.ಮಲ್ಲಿಕಾರ್ಜನ್ ಮಾತನಾಡಿ, ಪಾರ್ಲಿಮೆಂಟ್ ಒಂದು ಪವಿತ್ರ ಸ್ಥಳ. ಅಲ್ಲಿ ಯಾವ ರೀತಿ ವರ್ತಿಸಬೇಕೆಂಬ ತಿಳಿವಳಿಕೆ ಇವರಿಗೆ ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ಪರ ರಾಜ್ಯಸಭಾ ಸಭಾಪತಿ ಸ್ಥಾನ ಅಲಂಕರಿಸುವ ಉಪರಾಷ್ಟ್ರಪತಿ ಅವರಿಗೆ ಎಲ್ಲರೂ ಗೌರವ ಕೊಡಬೇಕೇ ಹೊರತು, ಈ ರೀತಿ ಅಣಕಿಸುವ ವರ್ತನೆ ಸಲ್ಲದು. ಮೂರು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಹತಾಶೆಯಿಂದ ವರ್ತಿಸುತ್ತಿದೆ ಎಂದು ದೂರಿದರು.
ಇತರ ರಾಜ್ಯಗಳಲ್ಲಿ ಆಗಿರುವ ವಿವಿಧ ಘಟನೆಗಳಿಗೆ ಪ್ರತಿಕ್ರಿಯಿಸಿರುವ ಸಂಸದ ರಾಹುಲ್‌ಗಾಂಧಿ ಅವರು, ಬೆಳಗಾವಿ ಜಿಲ್ಲೆಯಲ್ಲಿ ಮಹಿಳೆ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಒಂದು ಮಾತನ್ನು ಆಡಿಲ್ಲವೆಂದು ಅವರ ನಡೆಯನ್ನು ಖಂಡಿಸಿದರು.
ಮುಖಂಡರಾದ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಶಂಭು, ಪ್ರದೀಪ್, ಶೈಲಾ, ನಾಗರಾಜ, ಮನೋಜ್, ಪಾಂಡು, ಯಶವಂತ, ಕಿರಣ್, ಗಿರೀಶ್, ಲತಾ, ಸಂಜಯ್, ಕಾಂತರಾಜ್, ಪ್ರಕಾಶ್, ಒ.ಗೌರಣ್ಣ ಇತರ ಕಾರ‌್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net