ಉಪನೋಂದಣಾಧಿಕಾರಿ ಕುರ್ಚಿಗೆ ಸನ್ಮಾನ!

0
Published on

ಚಿಕ್ಕನಾಯಕನಹಳ್ಳಿ: ಭ್ರ್ರಷ್ಟಾಚಾರ ಆರೋಪದಡಿ ಪ್ರಕರಣ ದಾಖಲಾಗಿದ್ದರೂ ಅದೇ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನೋಂದಣಾಧಿಕಾರಿಗೆ ಮೈಸೂರು ಪೇಟ ಹಾಗೂ ಹಾರ ಹಾಕಿ ಸನ್ಮಾನಿಸಲು ಮುಂದಾದ ಘಟನೆ ಪಟ್ಟಣದ ಉಪನೋಂದಾಣಿ ಕಚೇರಿ ಸಾಯಾಯಿತು.

ಪಟ್ಟಣದ ನೆಹರು ವೃತ್ತದಿಂದ ಎತ್ತಿನ ಗಾಡಿಯಲ್ಲಿ ಪೇಟ ಹಾರ ಹಾಗೂ ಭ್ರಷ್ಟ ಅಧಿಕಾರಿಯ ್ಲೆಕ್ಸ್​ನೊಂದಿಗೆ ಮಡಕೆಯಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಉಪನೋಂದಣಿ ಕಚೇರಿಗೆ ತೆರಳಿದ ಕೆಆರ್​ಎಸ್​ ಪಕ್ಷದ ಮುಖಂಡರು,ಉಪನೋಂದಣಾಧಿಕಾರಿಗೆ ಸನ್ಮಾನಿಸಲು ಮುಂದಾದರು. ಈ ವೇಳೆ ಸಬ್​ರಿಜಿಸ್ಟ್ರಾರ್​ ಸನ್ಮಾನ ನಿರಾಕರಿಸಿದರು. ಈ ವೇಳೆ ಅಧಿಕಾರಿಯ ಕುರ್ಚಿಗೆ ಹಾರ ಪೇಟ ತೊಡಿಸಿ, ಸಂಗ್ರಹಿಸಿದ್ದ ದೇಣಿಗೆ ಹಣವನ್ನು ಟೇಬಲ್​ ಮೇಲೆ

ಸುರಿದು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

ಪಟ್ಟಣದಲ್ಲಿ ವ್ಯಕ್ತಿಯೊಬ್ಬರ ಹೆಸರಿನಲ್ಲಿದ್ದ ಜಮೀನನ್ನು ಅದೇ ಹೆಸರಿನ ಬೇರೊಬ್ಬರಿಗೆ ಪರಭಾರೆ ಮಾಡಿದ ಪ್ರಕರಣ ಅಧಿಕಾರಿ ವಿರುದ್ಧ ದಾಖಲಾಗಿತ್ತು. ಆದರೂ ಈ ಪ್ರಕರಣದಲ್ಲಿ ತಪ್ಪಿತಸ್ಥರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ದೂರು ದಾಖಲಾಗಿದ್ದರೂ ಉಪನೋಂದಾಣಾಧಿಕಾರಿ ತಾಲೂಕಿನಲ್ಲೇ ಕೆಲಸ ಮಾಡುತ್ತಿರುವುದನ್ನು ವಿರೋಧಿಸಿ ಭೂಮಿಯ ಮಾಲೀಕ ಎನ್ನಲಾದ ಮಲ್ಲಿಕಾರ್ಜನಯ್ಯ ನೇತೃತ್ವದಲ್ಲಿ ಕೆಎಸ್​ಆರ್​ ಪಕ್ಷದ ಕಾರ್ಯಕರ್ತರು ಮುಖಂಡರು ಪ್ರತಿಭಟಿಸಿದರು. ಕೆಆರ್​ಎಸ್​ ಪಕ್ಷದ ಮುಖಂಡ ಭಟ್ಟರಹಳ್ಳಿ ಮಲ್ಲಿಕಾರ್ಜುನ್​ ಮಾತನಾಡಿ, ತಾಲೂಕು ಆಡಳಿತ ಹದಗೆಟ್ಟಿದೆ. ಸಾಮಾನ್ಯ ಜನರ ಆಸ್ತಿ ಪಾಸ್ತಿಗಳಿಗೆ ಭದ್ರತೆ ಇಲ್ಲ. ಅಕ್ರಮವಾಗಿ ನೋಂದಣಿ ಮಾಡುವ ಮೂಲಕ ಮೂಲ ಮಾಲೀಕರನ್ನೇ ಇಲ್ಲದಂತೆ ಮಾಡುತ್ತಿದ್ದಾರೆ. ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ಆದ್ದರಿಂದ ಅಕ್ರಮವಾಗಿ ನೋಂದಣಿ ಮಾಡಿದ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸನ್ಮಾನಿಸುವ ಮೂಲಕ ಎಚ್ಚರಿಸಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net