ಉಪನ್ಯಾಸ ಇಂದು

Vijayavani-Featured-Image
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘವು ವೀರಪ್ಪ ವೀರಭದ್ರಪ್ಪ ನಾಗಶೆಟ್ಟಿ ದತ್ತಿ ನಿಮಿತ್ತ ಜು. 7ರಂದು ಸಂಜೆ 6 ಗಂಟೆಗೆ ರಾ.ಹ. ದೇಶಪಾಂಡೆ ಭವನದಲ್ಲಿ ವೀರಪ್ಪ ನಾಗಶೆಟ್ಟಿ ಬದುಕು ಮತ್ತು ಬರಹ ಉಪನ್ಯಾಸ, ಸಾಧಕರಿಗೆ ಸನ್ಮಾನ ಕಾಯಕ್ರಮ ಏರ್ಪಡಿಸಿದೆ.
ನಿವೃತ್ತ ಉಪನ್ಯಾಸಕ ಈರಣ್ಣ ಅಗಳಗಟ್ಟಿ ಅತಿಥಿ ಉಪನ್ಯಾಸಕರಾಗಿ ಆಗಮಿಸುವರು. ಡಾ. ಎನ್​.ಜಿ. ಮಹಾದೇವಪ್ಪ ಹಾಗೂ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಚನ್ನಮ್ಮನ ಕಿತ್ತೂರಿನ ಎಸ್​.ಬಿ. ಹೈಸ್ಕೂಲ್​ ವಿದ್ಯಾರ್ಥಿ ಶ್ರವಣ ಚಂದ್ರಪ್ಪ ಮೇಟ್ಯಾಲ ಅವರಿಗೆ ಸನ್ಮಾನಿಸಲಾಗುವುದು.
ದತ್ತಿದಾನಿ ಅಕ್ಕಮಹಾದೇವಿ ಸದಾನಂದ ನಾಗಶೆಟ್ಟಿ ಮತ್ತು ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿವೃತ್ತ ಮುಖ್ಯ ಗ್ರಂಥಾಲಯಾಧಿಕಾರಿ ಎಸ್​. ಎಸ್​. ನಾಗಶೆಟ್ಟಿ ಉಪಸ್ಥಿತರಿರುವರು. ವಿಶ್ರಾಂತ ಪ್ರಾಧ್ಯಾಪಕ ಡಾ. ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net