ಉಪಚುನಾವಣೆಯಲ್ಲಿ ಫಲಿಸಿದ ದ್ಯಾಮನಗೌಡರ ಲೆಕ್ಕಾಚಾರ

3 MNL 2-Web
ಸವದತ್ತಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಅವರೊಂದಿಗೆ ಮತಯಾಚಿಸುತ್ತಿರುವ ಪಂಚನಗೌಡ ದ್ಯಾಮನಗೌಡರ.
Published on

ಬೆಳಗಾವಿ: ಜಿದ್ದಾಜಿದ್ದಿನ ಕಣವಾಗಿದ್ದ ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಸವದತ್ತಿ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ 16,601ಕ್ಕೂ ಅಧಿಕ ಮತ ಪಡೆದಿದ್ದು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಜಾತಿ-ಮತಗಳ ಲೆಕ್ಕಾಚಾರದಲ್ಲೂ ಅಧಿಕ ಮತಗಳು ‘ಕೈ’ ಅಭ್ಯರ್ಥಿ ವಶವಾಗಿವೆ. ಪಕ್ಷದ ಈ ಸಾಧನೆ ಹಿಂದೆ ಸತೀಶ ಜಾರಕಿಹೊಳಿ ಕಾರ್ಯತಂತ್ರದೊಂದಿಗೆ ಯುವನಾಯಕ, ಕಾಂಗ್ರೆಸ್ ಮುಖಂಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ ಚುನಾವಣೆ ಲೆಕ್ಕಾಚಾರ ಅಡಗಿದೆ.

ಚುನಾವಣೆಗೆ ದಿನಾಂಕ ಘೋಷಣೆ ಯಾಗುತ್ತಿದ್ದಂತೆ ಎಚ್ಚೆತ್ತ ದ್ಯಾಮನಗೌಡರ ಅವರು ಕ್ಷೇತ್ರದ ಮುಖಂಡರು, ಅಭಿಮಾನಿಗಳು, ಮತದಾರರನ್ನು ಸತತವಾಗಿ ಸಂಪರ್ಕಿಸಿ, ಸಭೆ-ಸಮಾರಂಭ ನಡೆಸಿ ಸತೀಶ ಜಾರಕಿಹೊಳಿ ಪರ ಪ್ರಚಾರ ನಡೆಸಿದರು.

ಭವಿಷ್ಯದ ಚುನಾವಣೆ ಮೇಲೆ ಬೀಳಲಿದೆ ಪರಿಣಾಮ: 2023ರ ವಿಧಾನಸಭೆ ಚುನಾವಣೆಯಲ್ಲಿ ಸವದತ್ತಿ ಮತಕ್ಷೇತ್ರವನ್ನು ಕೈ ಪಾಳಯದ ವಶಕ್ಕೆ ಪಡೆಯಲು ಪಂಚನಗೌಡ ದ್ಯಾಮನಗೌಡ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಉಪಚುನಾವಣೆಯಲ್ಲಿ ಸದ್ಯ ಅವರ ಚುನಾವಣಾ ಲೆಕ್ಕಾಚಾರಗಳು ಕೈ ಹಿಡಿದಿವೆ. ಇದು ಭವಿಷ್ಯದ ಚುನಾವಣೆಗಳಲ್ಲಿ ಭಾರಿ ಪರಿಣಾಮ ಬೀರಲಿದೆ ಎನ್ನುತ್ತಾರೆ ತಜ್ಞರು.

ಮಹಾದಾಯಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿರುವ ದ್ಯಾಮನಗೌಡರ ಪಂಚಲಿಂಗೇಶ್ವರ ಯುವಕ ಸಂಘ ಕಟ್ಟಿಕೊಂಡು, ಸಹಕಾರಿ ಕ್ಷೇತ್ರದಲ್ಲಿ ಮಹಾಲಕ್ಷ್ಮೀ ಮಹಿಳಾ ಸೊಸೈಟಿ ಪ್ರಾರಂಭಿಸಲು ಮಾರ್ಗದರ್ಶನ ನೀಡಿ ಮಹಿಳೆಯರ ಅಭಿವೃದ್ಧಿಗೆ ಕಾರಣೀಕರ್ತರಾಗಿದ್ದಾರೆ. ಮಲ್ಲಿಕಾರ್ಜುನ ಪಿಕೆಪಿಎಸ್ ಸ್ಥಾಪಿಸಿ ರೈತರಿಗೆ ವಿವಿಧ ರೀತಿಯಲ್ಲಿ ನೆರವಾಗುತ್ತಿದ್ದಾರೆ. ಮಲಪ್ರಭಾ ಅಚ್ಚುಕಟ್ಟು ನೀರು ಬಳಕೆದಾರರ ಮಹಾಮಂಡಳಿ ಅಧ್ಯಕ್ಷರಾಗಿ, ಕೆಎಂಎ್ ನಿರ್ದೇಶಕರಾಗಿ ರೈತರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪಂಚನಗೌಡ ದ್ಯಾಮನಗೌಡರ ಸಂಘಟನಾ ಚತುರತೆ, ಜನತೆಯ ಪ್ರೀತಿ, ವಿಶ್ವಾಸ, ಸವದತ್ತಿ ತಾಲೂಕಿನ ಎಲ್ಲ ಕಾಂಗ್ರೆಸ್ ಮುಖಂಡರ ಸಹಕಾರವೇ ಈ ಚುನಾವಣೆಯಲ್ಲಿ ಹೆಚ್ಚಿನ ಮತ ಗಳಿಸಲು ಸಾಧ್ಯವಾಯಿತು.

ಶ್ರಮಕ್ಕೆ ಸಹಕಾರ ನೀಡಿದ ತಾಲೂಕಿನ ಜನತೆ: ಪಂಚನಗೌಡರ ಅವರ ಅಭಿವೃದ್ಧಿಪರ ಕಾರ್ಯಕ್ರಮಗಳಿಗೆ ತಾಲೂಕಿನ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅವರಲ್ಲಿರುವ ಸೇವಾಮನೋಭಾವ, ಪರೋಪಕಾರ, ದಾನಧರ್ಮಗಳು ಯುವಮುಖಂಡರು, ಕಾರ್ಯಕರ್ತರಿಗೆ ಮಾದರಿಯಾಗಿವೆ.

ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಕೋನದಿಂದ ಕಾರ್ಯಕರ್ತರನ್ನು ಒಗ್ಗೂಡಿಸಿ ಮತಕ್ಷೇತ್ರದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಭವಿಷ್ಯದಲ್ಲಿ ಸವದತ್ತಿ ಮತಕ್ಷೇತ್ರ ಕೈ ಪಾಳಯದ ವಶವಾಗುವುದು ನಿಶ್ಚಿತ.| ಪಂಚನಗೌಡ ದ್ಯಾಮನಗೌಡರ ಡಿಸಿಸಿ ಬ್ಯಾಂಕ್ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net