ಉಪಕಸುಬಾಗಿ ಹೈನುಗಾರಿಕೆ ಮಾಡಲಿ

17RAIABAG1
Published on

ರಾಯಬಾಗ: ಸಾಂಪ್ರದಾಯಿಕ ಕೃಷಿ ವೆಚ್ಚ ಹೆಚ್ಚಾಗುತ್ತಿದ್ದು, ಉಪ ಕಸುಬುದಾರಿಕೆಯಾಗಿ ರೈತರು ಹೈನುಗಾರಿಕೆ ಕೈಗೊಳ್ಳಬೇಕು ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.

ತಾಲೂಕಿನ ಭಿರಡಿ ಗ್ರಾಮದಲ್ಲಿ ಹುಬ್ಬಳ್ಳಿಯ ಪಾರಾದೀಪ ಫಾಸ್ಪೇಟ್, ಜುವಾರಿ ಫಾರ್ಮ್ಹಬ್ ಮತ್ತು ವೀರಭದ್ರೇಶ್ವರ ಫರ್ಟಿಲೈಜರ್ಸ್ ಸಹಯೋಗದಲ್ಲಿ ಸ್ವಾತಂತ್ರ‍್ಯ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಬ್ಬು ಬೆಳೆ ವಿಚಾರ ಸಂಕಿರಣ ಹಾಗೂ ಜವಾರಿ (ಖಿಲಾರಿ) ದನಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಕಬ್ಬು ಬೆಳೆ ವಿಷಯ ತಜ್ಞ, ಡಾ.ಸಂಜೀವ ಮಾನೆ ಮಾತನಾಡಿ, ರೈತರು ಭೂಮಿ ಹದಗೊಳಿಸಿ, ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಸಾವಯವ ಗೊಬ್ಬರ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಬೇಕೆಂದು ಕರೆ ನೀಡಿದರು.

ಬೆಂಗಳೂರು ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ವಿಜ್ಞಾನಿ ಡಾ.ಪ್ರವೀಣ ರಣದೇವ, ಮಹಾದೇವ ಬೋರಗಾಂವೆ, ಶ್ರೀಧರ ಕುಡಚೆ, ಗಣೇಶ ಹೆಗಡೆ, ಸಿದ್ರಾಮ ರೆಡ್ಡಿ, ಎಚ್.ಎಂ. ಮಹೇಶ್ವರ, ಶರಣಬಸು ಕೆಂಭಾವಿ, ಗಜರಾಜ ಭಾಂಡೇಕರ, ಮಂಜುನಾಥ ಕಳಸನ್ನವರ, ಮುರುಗೇಶ ನಿಶಾನದಾರ, ಭಯ್ಯಾ ಸರಕಾರ, ಶಂಕರ ಗಡಕರಿ, ಭೀಮಪ್ಪ ನಿಡವಣಿ, ಕೆಂಪಣ್ಣ ಮೈಶಾಳೆ ಹಾಗೂ ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net