

ಸಂಬರಗಿ: ಇಲ್ಲಿನ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ಭಾನುವಾರ ಜರುಗಿದ ಉಪ ಚುನಾವಣೆಯಲ್ಲಿ ಗಣೇಶ ಕದಮ್ ೫೦೭ ಮತ ಪಡೆದು ಆಯ್ಕೆಯಾಗಿದ್ದಾರೆ.
ಗ್ರಾಮದ ಪಿಕೆಪಿಎಸ್ ನಿರ್ದೇಶಕರೊಬ್ಬರು ಈಚೆಗೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಖಾಲಿಯಾದ ನಿರ್ದೇಶಕ ಸ್ಥಾನಕ್ಕೆ ಗಣೇಶ ಕದಮ್, ದಿನಕರ ಪವಾರ ಮತ್ತು ಸತೀಶ ಸನದಿ ನಾಮಪತ್ರ ಸಲ್ಲಿಸಿದ್ದರು. ಒಟ್ಟು ೯೯೩ ಮತಗಳು ಚಲಾವಣೆಯಾದವು. ಈ ಪೈಕಿ ದಿನಕರ ಪವಾರ ೪೮೫ ಹಾಗೂ ಸತೀಶ ಸನದಿ ಕೇವಲ ೧ ಮತ ಪಡೆದು ಪರಾಭವಗೊಂಡಿದ್ದಾರೆ ಎಂದು ಚುನಾವಣಾ ಅಧಿಕಾರಿ ಆಶಾ ಬಿರಾದಾರ ತಿಳಿಸಿದ್ದಾರೆ. ಫಲಿತಾಂಶ ಹೊರಬಿಳುತ್ತಿದ್ದಂತೆ ಶಿವಾಜಿ ವೃತ್ತದಲ್ಲಿ ಗಣೇಶ ಕದಮ್ ಬೆಂಬಲಿಗರು ಗುಲಾಲ ಎರಚಿ ಸಂಭ್ರಮಿಸಿದರು.
ವಿಲಾಸ ಟೋನ, ತುಕಾರಾಂ ಶೆಳಕಿ, ಸರ್ಜೇರಾವ ಮಾನೆ, ಟೋಪಾಜಿ ಅವಲೇಕರ, ಪಿಂಟು ನಟೇಕರ, ಸುಷ್ಮಾ ದೇವಮಾನೆ, ರಾಜು ಪಾಸಲೆ, ಮುರಳೀಧರ ದೇಶಪಾಂಡೆ, ಬಂಡು ದೇಶಪಾಂಡೆ, ಅಶೋಕ ಮಾನೆ, ವಿಕಾಸ ಸೂಡಿ, ವಿಶ್ವನಾಥ ದೇವಮಾನೆ ಇತರರು ಇದ್ದರು.