

ಚಿತ್ರದುರ್ಗ: ಕೃಷಿಗೆ ಯೋಗ್ಯ ಭೂಮಿಯನ್ನಾಗಿಸಲು,ಜಮೀನಿನಲ್ಲಿರುವ ಹೆಚ್ಚುವರಿ ಉಪ ಖನಿಜಗಳನ್ನು ತೆರವುಗೊಳಿಸಿ ಸಾಗಿಸಲು ಕರ್ನಾಟಕ ಉ ಪ ಖನಿಜ ರಿಯಾಯಿತಿ ನಿಯಮಾವಳಿ ಅಡಿ ನೀಡಿದ ಅನುಮತಿ ಉಲ್ಲಂಘಿಸಿ, ಅಕ್ರಮ ಗಣಿಕಾರಿಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕ್ಕಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಬುಧವಾರ ಗಣಿಗೆ ಸಂಬಂಧಿಸಿದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿ, ಅನುಮತಿ ಸಂದರ್ಭ ವಿಧಿಸಿದ್ದ ಷರತ್ತುಗಳನ್ನು ವಿಧಿಸಲಾಗುತ್ತಿದ್ದರೂ ಕೆಲವೆಡೆ ಜಮೀನುಗಳಿಂದ ಹೆಚ್ಚುವರಿಯಾಗಿ ಉಪ ಖನಿಜಗಳನ್ನು ಗಣಿಗಾರಿಕೆ ಮಾಡಲಾ ಗಿದೆ.
ಇದರಿಂದ ಕೃಷಿ ಭೂಮಿ ಹಾಳಾಗುವುದರ ಜತೆಗೆ ಪರಿಸರಕ್ಕೆ ಮಾರಕವಾಗುತ್ತದೆ ಹಾಗೂ ರಾಜಸ್ವಕ್ಕೂ ಧಕ್ಕೆ ಉಂಟಾಗುತ್ತದೆ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಕಂಡುಬಂದರೆ,ತಹಸೀಲ್ದಾರ್,ಎಸಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಂದ ವರದಿ ಪಡೆದು ಕ್ರಮ ಕೈಗೊಳ್ಳ ಬೇಕೆ ಂದರು.
ಅಕ್ರಮ ಕಲ್ಲು ಗಣಿಗಾರಿಕೆ ದೂರುಗಳನ್ನು ಪರಿಶೀಲಿಸಲು ಎಡಿಸಿ ಅಧ್ಯಕ್ಷತೆ ಉಪ ಸಮಿತಿ ರಚಿಸಲಾಗಿದ್ದು,ದೂರುದಾರರ ಸಮ್ಮುಖ ದ ಲ್ಲೇ ಕಲ್ಲು ಕ್ವಾರಿಗಳ ಡ್ರೋನ್ ಸರ್ವೆಗೆ ಡಿಸಿ ಸೂಚಿಸಿದರು. ಹೆಚ್ಚುವರಿ ಗಣಿಗಾರಿಕೆಯಾಗಿದ್ದರೆ ನಿಯಮಾನುಸಾರ ಕ್ರಮ ವಹಿಸಬೇಕು. ಸಾ ರ್ವಜನಿಕರ ದೂರಗಳಿಗೆ ಅಧಿಕಾರಿಗಳು ಕಾಲಮಿತಿಯೊಳಗೆ ಸೂಕ್ತ ಉತ್ತರ ಅಥವಾ ಹಿಂಬರಹ ನೀಡಬೇಕು. ದೂರಗಳನ್ನು ನಿರ್ಲಕ್ಷಿಸ ಬಾ ರದೆಂದು ನಿರ್ದೇಶಿಸಿದರು.
ಇಪ್ಪತ್ತು ವರ್ಷ ಮೀರಿದ ಅದಿರು,ಖನಿಜ ಸಾಗಿಸುವ ವಾಹನಗಳನ್ನು ಎಫ್‌ಸಿ ನವೀಕರಿಸಬಾರದು. ಅನುಮತಿಸಿದ ತೂಕಕ್ಕಿಂತ ಹೆಚ್ಚಿನ ಅದಿರು ಸಾಗಿಸುವ ವಾಹನಗಳಿಗೆ ದಂಡ ವಿಧಿಸಬೇಕೆಂದು ಡಿಸಿ ಹೇಳಿದರು. ಅದಿರು ವಾಹನ ಜಪ್ತಿ ಮಾಡ ಬೇಕೆಂದರು. ಜಿಲ್ಲೆಯಲ್ಲಿ 33 5 ಕ್ಕೂ ಹೆಚ್ಚು ಅದಿರು ಸಾಗಾಣಿಕೆ ಭಾರಿ ವಾಹನಗಳಿವೆ. 18 ವಾಹನಗಳು 20 ವರ್ಷ,268 ವಾಹನಗಳು 15 ವರ್ಷ ಪೂರೈಸಿವೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳಿಸಿಂಗೆ ಹೇಳಿದರು.
ಎಸ್‌ಪಿ ರಂಜಿತ್ ಕುಮಾರ್‌ಬಂಡಾರು,ಎಡಿಸಿ ಬಿ.ಟಿ.ಕುಮಾರಸ್ವಾಮಿ,ಎಸಿ ಎಂ.ಕಾರ್ತಿಕ್,ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ಮಹೇಶ್ ಮತ್ತಿತರ ಅಧಿಕಾರಿಗಳಿದ್ದರು.
--
ಕೋಟ್
ನಿಯಮ ಪಾಲಿಸಲಿ
ಕ್ರಷರ್‌ಗಳಲ್ಲಿ ನಿಯಮ ಪಾಲನೆ ಆಗಬೇಕು. ಆದರೆ ಜಿಲ್ಲೆಯಲ್ಲಿ ಹಲವು ಕ್ರಷರ್‌ಗಳಲ್ಲಿ ನಿಯಮಗಳ ಪಾಲನೆ ಆಗುತ್ತಿಲ್ಲ ಎಂಬ ದೂ ರು ಹಿನ್ನೆಲೆಯಲ್ಲಿ ಎಲ್ಲ 29 ಕ್ರಷರ್‌ಗಳನ್ನು ಅಧಿಕಾರಿಗಳು ಪರಿಶೀಲಿಸಬೇಕು.
ಎಸ್.ಜೆ.ಸೋಮಶೇಖರ್,ಸಿಇಒ,ಜಿಪಂ,ಚಿತ್ರದುರ್ಗ.
----