ಉನ್ನತ ಶಿಕ್ಷಣ ಸಾಧನೆಗೆ ಪರಿಣಾಮಕಾರಿ ಬುನಾದಿ ಸಾಕ್ಷರತೆ ಅಗತ್ಯ

ctd MALLAPURA ---
Published on

ಚಿತ್ರದುರ್ಗ:ಭವಿಷ್ಯದ ಉನ್ನತ ಶಿಕ್ಷಣದಲ್ಲಿ ಉತ್ತಮ ಸಾಧನೆಗೆ ಪ್ರಾಥಮಿಕ ಹಂತದಲ್ಲಿ ಪರಿಣಾಮಕಾರಿ ಬುನಾದಿ ಸಾಕ್ಷರತೆ ಜ್ಞಾನ ಬೆಳೆ ಸುವುದು ಅಗತ್ಯವೆಂದು ಡಯಟ್ ಉಪನ್ಯಾಸಕ ಯು.ಸಿದ್ದೇಶಿ ಹೇಳಿದರು.

ನಗರದ ಮಲ್ಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಲಿಕಲಿ ತರಗತಿ ಮಕ್ಕಳ ಕಲಿಕಾ ಪ್ರಗತಿ ಪರಿಶೀಲಿಸಿ ಮಾ ತನಾಡಿ,ಮಕ್ಕಳ ಕಲಿಕಾ ಸಾಮರ್ಥ್ಯ ಗುರುತಿಸಿ ಶಿಕ್ಷಕರು ಮಾರ್ಗದರ್ಶನ ಮಾಡಬೇಕು. ಮೂಲ ಕೌಶಲಗಳಾದ ಆಲಿಸುವುದು,ಮಾತ ನಾಡುವುದು,ಓದುವುದು ಮತ್ತು ಬರೆಯುವುದರಲ್ಲಿ ಸಾಮರ್ಥ್ಯ ಬೆಳೆಸಿದಾಗ ಭಾಷೆಯಲ್ಲಿ ಪ್ರಭುತ್ವ ಪಡೆಯಲು ಸಾಧ್ಯ,ಇದರಿಂದ ಉ ನ್ನತ ಶಿಕ್ಷಣ ಕಲಿಕೆ ಸುಲಭವಾಗಲಿದೆ ಎಂದರು.

ಉಪನ್ಯಾಸಕ ಎಸ್.ಬಸವರಾಜು ಮಾತನಾಡಿ,ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಶೈಕ್ಷಣಿಕ ಭಾಗೀದಾರರಲ್ಲಿ ಸಮನ್ವಯತೆ ಅಗತ್ಯ. ಶಾ ಲೆಯಲ್ಲಿ ಕೌಟುಂಬಿಕ ವಾತಾವರಣವಿದ್ದಾಗ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಮುಖ್ಯಶಿಕ್ಷಕರು,ಶಿಕ್ಷಕರು ಮತ್ತು ಪಾ ಲಕರ ಸಹಕಾರ,ಸಮನ್ವಯತೆಯಿಂದ ಮಕ್ಕಳ ಹಾಜರಾತಿ ಶೇ.100 ರಷ್ಟಿದೆ ಎಂದರು. ಮುಖ್ಯಶಿಕ್ಷಕಿ ಕೆ.ಒ ರತ್ನಮ್ಮ, ಎಚ್.ಸೌಭಾಗ್ಯಮ್ಮ, ಪಿ.ಶೋಭಾ,ಜೆಆರ್ ಭಾಗ್ಯ,ಜಿ.ಲತಾ,ಎಂ.ಶಿಲ್ಪಾ, ಕುಮಾರಿ ಸಲೀಮಾ ಇದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net