ಉನ್ನತ ಶಿಕ್ಷಣ ದೊರಕಿಸಲು ಆದ್ಯತೆ

23-77
ನಾಗನೂರ ಗ್ರಾಪಂನಲ್ಲಿ ಐಟಿಐ ಮಹಾವಿದ್ಯಾಲಯದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಭೂಮಿಪೂಜೆ ನೆರವೇರಿಸಿದರು. ಜಯವಂತ ಭಾಟಲೆ, ಅವಿನಾಶ ಪಾಟೀಲ, ರಾಜೇಂದ್ರ ಗುಂಡೇಶಾ, ಸೋನಾಲಿ ಉಪಾಧ್ಯೆ, ರಾಜಶ್ರೀ ಪವಾರ ಇತರರಿದ್ದರು.
Published on

ನಿಪ್ಪಾಣಿ, ಬೆಳಗಾವಿ: ಗಡಿಭಾಗದಲ್ಲಿ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಅಕ್ಕೋಳ ಗ್ರಾಮದಲ್ಲಿ ಸರ್ಕಾರಿ ಪದವಿ ಮಹಾವಿದ್ಯಾಲಯ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ (ಐಟಿಐ) ಕಾಲೇಜು ಸ್ಥಾಪಿಸಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ತಾಲೂಕಿನ ಅಕ್ಕೋಳ ಗ್ರಾಮದಲ್ಲಿ ಸರ್ಕಾರಿ ಐಟಿಐ ಮಹಾವಿದ್ಯಾಲಯದ ಕಟ್ಟಡವನ್ನು ಮಂಗಳವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಎಲ್ಲ ಸರ್ಕಾರಿ ಶಾಲೆ, ಮಹಾವಿದ್ಯಾಲಯಗಳಿಗೆ ಸ್ವಂತ ಕಟ್ಟಡ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು.

ಪಂಚಾಯತ್ ರಾಜ್ ಇಲಾಖೆಯಿಂದ ಮಂಜೂರಾದ 2 ಕೋಟಿ ರೂ. ಅನುದಾನದಲ್ಲಿ 4.23 ಎಕರೆ ಜಾಗದಲ್ಲಿ 12 ಕೊಠಡಿಗಳ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. 15 ದಿನಗಳಲ್ಲಿ ಮಹಾವಿದ್ಯಾಲಯದಲ್ಲಿ ಕೊಳವೆ ಬಾವಿ ಕೊರೆಸಲಾಗುತ್ತದೆ. ಗ್ರಾಮದ 13 ದೇವಾಲಯಗಳ ಜೀರ್ಣೊದ್ಧಾರಕ್ಕೆ ಮುಜುರಾಯಿ ಇಲಾಖೆಯಿಂದ 1.63 ಕೋಟಿ. ರೂ ಅನುದಾನ ಕಲ್ಪಿಸಲಾಗಿದೆ. ನನ್ನ 10 ವರ್ಷದ ಅಧಿಕಾರದಲ್ಲಿ ಅಕ್ಕೋಳ ಗ್ರಾಮದ ಸಮಗ್ರ ಅಭಿವೃದ್ಧಿಗೆ 62.63 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿದರು. ಕೌಶಲ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಸವಪ್ರಭು ಹಿರೇಮಠ, ಅಕ್ಕೋಳ ಗ್ರಾಪಂ ಅಧ್ಯಕ್ಷೆ ಅನಿತಾ ಕುಂಬಾರ, ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಮಲಗೊಂಡ ಪಾಟೀಲ, ಸಂಚಾಲಕ ರಾಮಗೌಡ ಪಾಟೀಲ, ಸಮಿತ ಸಾಸನೆ, ಮಾಳಪ್ಪ ಪಿಸುತ್ರೆ, ಸಿದ್ದು ನರಾಟೆ, ಜಿತೇಂದ್ರ ಕುಲಕರ್ಣಿ, ಬಾಪುಸಾಹೇಬ ಕಟ್ಟಿಕಲ್ಲೆ, ರಾಮಗೌಡ ಪಾಟೀಲ, ಪ್ರಾಚಾರ್ಯ ವಿನೋದ ಗೋಕಾವಿ, ಪ್ರೊ. ತುಕಾರಾಮ ಹಡಕರ, ಎಸ್.ಎಸ್.ಖಿಲಾರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net