

ನಿಪ್ಪಾಣಿ: ಸ್ಕಿಲ್ ಪ್ಲಸ್ ಪ್ಲೇಸ್‌ಮೆಂಟ್ ಲ್ಯಾಬ್ ಅಭಿವೃದ್ಧಿಗಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ ಯೋಜನೆಯಡಿಯಲ್ಲಿ ಸುಮಾರು ೨೦ ಲಕ್ಷ ರೂ. ಕೌಶಲಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಗಾಗಿ ವಿನಿಯೋಗಿಸಲಾಗಿದ್ದು, ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲೆಯ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ಲಸ್ಟರ್ ಮುಖ್ಯಸ್ಥ ಗಂಗಾಧರ ಹೆಗಡೆ ತಿಳಿಸಿದರು.
ಪಟ್ಟಣದ ಕೆಎಲ್‌ಇ ಸಂಸ್ಥೆಯ ಜಿ.ಐ.ಬಾಗೇವಾಡಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಎಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ ಯೋಜನೆ ಹಾಗೂ ಹುಬ್ಬಳ್ಳಿಯ ದೇಶಪಾಂಡೆ ಸ್ಕಿಲ್ಲಿಂಗ್ ಸಹಯೋಗದಲ್ಲಿ ಸ್ಕಿಲ್ ಪ್ಲಸ್ ಪ್ಲೇಸ್‌ಮೆಂಟ್ ಲ್ಯಾಬ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಈವರೆಗೂ ಸುಮಾರು ೪೦೦ಕ್ಕೂ ಹೆಚ್ಚು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಇನ್ನೂ ಹೆಚ್ಚಿನ ಉದ್ಯೋಗಾವಕಾಶ ಮತ್ತು ಕೌಶಲಾಭಿವೃದ್ಧಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಲ್ಯಾಬ್ ಉದ್ಘಾಟಿಸಲಾಗಿದೆ ಎಂದರು.
ಕೆಎಲ್‌ಇ ಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕ ಪ್ರವೀಣ ಬಾಗೇವಾಡಿ ಉದ್ಘಾಟಿಸಿದರು. ಡಾ.ಎಸ್.ಎಂ.ರಾಯಮಾನೆ, ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷ ಮಹೇಶ ಬಾಗೇವಾಡಿ, ಎಚ್‌ಡಿಎಫ್‌ಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ವಿಠ್ಠಲ ಶಿಂಧೆ, ಹುಬ್ಬಳ್ಳಿಯ ದೇಶಪಾಂಡೆ ಸ್ಕಿಲ್ಲಿಂಗ್ ಕ್ಲಸ್ಟರ್ ಮುಖ್ಯಸ್ಥ ಶಿವಪ್ಪ ಪಾಟೀಲ, ತರಬೇತುದಾರ ಮಹಾಲಿಂಗ ಮಯಣ್ಣವರ, ಸ್ನೇಹಾ ಜೋಡಟ್ಟಿ, ಪ್ಲೇಸ್‌ಮೆಂಟ್ ಅಧಿಕಾರಿ ಪ್ರೊ.ಶಂಕರಮೂರ್ತಿ ಕೆ.ಎನ್., ಇತರರಿದ್ದರು. ಪ್ರೀತಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರಾಪ್ತಿ ರೊಡ್ಡ ಸ್ವಾಗತಿಸಿದರು. ಸಾಕ್ಷಿ ಮತ್ತು ವೈಭವ ನಿರೂಪಿಸಿದರು. ಅಬೋಲಿ ವಂದಿಸಿದರು.