ಉದ್ಯೋಗದ ಜತೆ ಆರೋಗ್ಯ ಕಾಳಜಿ ವಹಿಸಿ

11-100.
ಸವದತ್ತಿ ತಾಲೂಕಿನ ಮದ್ಲೂರ ಗ್ರಾಮದಲ್ಲಿ ಮನರೇಗಾ ಕೂಲಿಕಾರಿಗೆ ಉದ್ಯೋಗ ಚೀಟಿ ವಿತರಿಸಲಾಯಿತು. ಮಲಿಕಜಾನ ಮೋಮಿನ, ಮಹಾಂತೇಶ ಹಿರೇಮಠ, ಮಹಾದೇವ ಕಾಮಣ್ಣವರ, ಯಲ್ಲಪ್ಪ ಕಾಮಣ್ಣವರ, ಅನಿಲ ಹಕಾರಿ, ಎಸ್.ಎನ್. ಕಡಹಳ್ಳಿ, ಎಸ್.ಎ್. ದೊಡಮನಿ, ಬಿ.ಎಲ್. ಹೊಟ್ಟಿನವರ ಇತರರಿದ್ದರು.
Published on

ಸವದತ್ತಿ, ಬೆಳಗಾವಿ: ಗ್ರಾಮೀಣರಿಗೆ ಉದ್ಯೋಗಾವಕಾಶ ನೀಡುವ ಜತೆ ಆರೋಗ್ಯದ ಕುರಿತು ಕಾಳಜಿ ವಹಿಸುವುದು ಸಹ ನರೇಗಾದ ಒಂದು ಭಾಗವಾಗಿದೆ ಎಂದು ತಾಲೂಕು ಪಂಚಾಯಿತಿ ಮಾಹಿತಿ ಶಿಕ್ಷಣ ಸಂವಹನ ಸಂಯೋಜಕ ಮಲಿಕಜಾನ್ ಮೋಮಿನ್ ಹೇಳಿದರು.

ತಾಲೂಕಿನ ಮದ್ಲೂರ ಗ್ರಾಮದಲ್ಲಿ ಮನರೇಗಾ ಕೂಲಿ ಕಾರ್ಮಿಕರಿಗಾಗಿ ಗುರುವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅದರು, ಕೂಲಿಕಾರ್ಮಿಕರು ಇ-ಶ್ರಮ ಕಾರ್ಡ ಮೂಲಕ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.

ಐಸಿಟಿಸಿ ಕೌನ್ಸಿಲರ್ ಮಹಾಂತೇಶ ಹಿರೇಮಠ ಮಾತನಾಡಿ, ಪೌಷ್ಟಿಕ ಆಹಾರ ಸೇವನೆ ಜತೆ ಯೋಗ, ಧ್ಯಾನದಂತಹ ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು. ಶಿಬಿರದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಉದ್ಯೋಗ ಚೀಟಿ ವಿತರಣೆ ಹಾಗೂ ಆರೋಗ್ಯ ಉಚಿತ ತಪಾಸಣೆ ನಡೆಸಲಾಯಿತು. ಗ್ರಾಪಂ ಅಧ್ಯಕ್ಷೆ ಕೀರವ್ವ ಹೂಲಿ ಮಾತನಾಡಿದರು.

ತಾಪಂ ತಾಂತ್ರಿಕ ಸಂಯೋಜಕ ಮಹಾದೇವ ಕಾಮಣ್ಣವರ, ಯಲ್ಲಪ್ಪ ಕಾಮಣ್ಣವರ, ಅನಿಲ ಹಕಾರಿ, ಎಸ್.ಎನ್. ಕಡಹಳ್ಳಿ, ಎಸ್.ಎ್. ದೊಡಮನಿ, ಬಿ.ಎಲ್.ಹೊಟ್ಟಿನವರ, ಸಣ್ಣನಿಂಗಪ್ಪ ಪಚ್ಚಿನವರ, ಪುಂಡಲೀಕ ಉಪ್ಪಾರ, ಸೋಮಪ್ಪ ಕಲ್ಲೊಳ್ಳಿ, ಪ್ರಕಾಶ ಮಾಂಗ, ಹನುಮಂತರಾವ ಪಚ್ಚಿನವರ, ಉಮೇಶ ಗೊರವನಕೊಳ್ಳ, ಪವಿತ್ರಾ ಮಾದರ, ಪಿಡಿಒ ರಾಘವೇಂದ್ರಕುಮಾರ ಎಸ್.ಪಿ, ಎಲ್.ಎಸ್. ಬಟಕುರ್ಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net