ಉದ್ಯೋಗ ಸೃಜನೆ ಜತೆಗೆ ಪ್ರಗತಿ ಸಾಧಿಸಿ

MEETINIG
Published on

ಯಾದಗಿರಿ: ನರೇಗಾ ಯೋಜನೆಯಡಿ ಹೆಚ್ಚು ಉದ್ಯೋಗ ಸೃಜನೆಯ ಜತೆಗೆ ಸೂಕ್ತ ಪ್ರಗತಿ ಸಾಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್ ಇಲಾಖೆ ಆಯುಕ್ತೆ ಶಿಲ್ಪಾನಾಗ್ ಅವರು ಸಂಬಂಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ನರೇಗಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಮಂಜೂರಾದ ಅನುದಾನ ಸಮರ್ಪಕವಾಗಿ ಬಳಸಿಕೊಂಡು ಶೇ.ನೂರರಷ್ಟು ಗುರಿ ಸಾಸಬೇಕು.ಗ್ರಾಮೀಣ ಪ್ರದೇಶಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಉದ್ಯೋಗ ಸೃಜನೆ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಹೆಚ್ಚಿನ ನೋಂದಣಿ, ಉದ್ಯೋಗ ದಿನಗಳನ್ನು ಸಹ ಸೃಜಿಸಿ ನೈಜ ಫಲಾನುಭವಿಗಳಿಗೆ ಜಾಬ್ ಕಾರ್ಡ್ ವಿತರಣೆ ಮಾಡಬೇಕು. ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡ, ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಅರ್ಹ ಫಲಾನುಭವಿಗಳಿಗೆ ಜಾಬ್ ಕಾರ್ಡ್ ನೀಡಬೇಕು. ವಿಕಲಚೇತನರಿಗೆ ಪ್ರಥಮ ಆದ್ಯತೆ ಕೊಡಬೇಕು ಎಂದರು.

ನರೇಗಾ ಯೋಜನೆಯಡಿ ಸಕ್ರಿಯ ಕಾರ್ಯಕರ್ತರು ಜಾಬ್ ಕಾಡರ್್ ಪಡೆದು, ಈ ಹಿಂದೆ ಕೋವಿಡ್ ಸೇರಿದಂತೆ ಕಾರಣಾಂತರಗಳಿಂದ ಮರಣ ಹೊಂದಿದ್ದಲ್ಲಿ ಅಂಥವರ ಬಗ್ಗೆ ಮಾಹಿತಿ ಕಲೆಹಾಕಿ ಜ.20ರೊಳಗೆ ಅವರ ಹೆಸರು ತೆಗೆದು ಹಾಕುವ ಕಾರ್ಯ ಮಾಡಬೇಕು. ಕೇಂದ್ರ ಸಕರ್ಾರದಿಂದಲೂ ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸಕ್ರಿಯ ಜಾಬ್ ಕಾರ್ಡ್ ಹಾಗೂ ನೋಂದಾಯಿತ ಜಾಬ್ಕಾ ಕಾರ್ಡ್ ಳ ಬಗ್ಗೆಯೂ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net