ಉದ್ಯೋಗ ಮೇಳದಲ್ಲಿ 22 ಮಂದಿಗೆ ಕೆಲಸ

IMG-20230721-WA0029.jpg
Published on

ದಾವಣಗೆರೆ: ಜಿಲ್ಲಾಡಳಿತ ಭವನದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಶುಕ್ರವಾರ ಉದ್ಯೋಗ ಮೇಳ ಆಯೋಜಿಸಲಾಗಿತ್ತು. ಎಸ್ಸೆಸ್ಸೆಲ್ಸಿ, ಪಿಯುಸಿ ವ್ಯಾಸಂಗ ಮಾಡಿದವರು, ಪದವೀಧರರು ಶೈಕ್ಷಣಿಕ ದಾಖಲಾತಿಗಳೊಂದಿಗೆ ಭಾಗವಹಿಸಿದ್ದರು.

ಒಟ್ಟು 103 ಉದ್ಯೋಗಾಕಾಂಕ್ಷಿಗಳು ಹಾಜರಾಗಿದ್ದು, 22 ಮಂದಿ ಉದ್ಯೋಗದ ಲಾಭ ಪಡೆದರು. 35 ಅಭ್ಯರ್ಥಿಗಳನ್ನು ಅರ್ಹತಾ ಪಟ್ಟಿಗೆ ಆಯ್ಕೆ ಮಾಡಲಾಗಿದ್ದು ಅವರಿಗೆ ಎರಡನೇ ಹಂತದ ಸಂದರ್ಶನ ನಡೆಸುವ ಬಗ್ಗೆ ಕಂಪನಿ ಪ್ರತಿನಿಧಿಗಳು ತಿಳಿಸಿದರು.

ಬೆಂಗಳೂರಿನ ಅಪೋಲೋ ಹೋಂ ಕೇನ್ ಲಿಮಿಟೆಡ್, ದಾವಣಗೆರೆಯ ಫ್ಯೂಜಿಯಂ ಮೈಕ್ರೋಫೈನಾನ್ಸ್ ಲಿಮಿಟೆಡ್, ಶ್ರೇಯಾ ಕಾರ್ ಏಜೆನ್ಸೀಸ್ ಇಂಡಿಯಾ, ದೇಶಪಾಂಡೆ ಫೌಂಡೇಷನ್, ತೇಜ ಟೆಕ್ನಿಕಲ್ ಸರ್ವೀಸ್ ಮೊದಲಾದ ಆರು ಕಂಪನಿಗಳು ಭಾಗವಹಿಸಿದ್ದವು. ಜಿಲ್ಲಾ ಉದ್ಯೋಗಾಧಿಕಾರಿ ಡಿ.ರವೀಂದ್ರ ಹಾಗೂ ಉದ್ಯೋಗಾಭಿವೃದ್ಧಿ ನಿರ್ವಾಹಕ ಮೋಹನ್‌ಕುಮಾರ್ ಮೇಳವನ್ನು ನಿರ್ವಹಿಸಿದರು.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net