ಉದ್ಯೋಗ ಮೇಳದ ಲಾಭ ಪಡೆಯಲಿ

23KAGWAD1
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಕಾಗವಾಡ: ಬೃಹತ್ ಉದ್ಯೋಗ ಮೇಳದಲ್ಲಿ ಸುಮಾರು ೫೦೦ ಯುವಕ-ಯುವತಿಯರಿಗೆ ಉದ್ಯೋಗ ದೊರಕಿದೆ. ಇದರ ಲಾಭ ಪಡೆದುಕೊಳ್ಳಿ ಎಂದು ಉದ್ಯೋಗ ವಿನಿಮಯ ಕಚೇರಿ ಜಿಲ್ಲಾ ಅಽಕಾರಿ ರಾಜಶೇಖರ ಚಿಕ್ಕಮಠ ತಿಳಿಸಿದರು.

ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಜಿಲ್ಲಾ ಹಾಗೂ ಬೆಳಗಾವಿಯ ಕೌಶಲ ಅಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ, ಶ್ರೀಮಲ್ಲಿಕಾರ್ಜುನ ವಿದ್ಯಾಪೀಠ ಮತ್ತು ಸ್ಥಳೀಯ ಶಿವಾನಂದ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.

ಶಿವಾನಂದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಆರ್.ಕರ್ಕಿ, ಗುರುಗೌಡ ಪಾಟೀಲ ಮಾತನಾಡಿದರು.

ಬೆಳಗಾವಿ ಜಿಲ್ಲೆ ಉದ್ಯೋಗ ವಿನಿಮಯ ಇಲಾಖೆ ಅಧಿಕಾರಿ ಜಿ.ಎಸ್.ಕೋರಸಗವ, ಕೌಶಲ ಅಭಿವೃದ್ಧಿ ವಿಭಾಗದ ಅರುಣಕುಮಾರ ಮಾಡೂಳ್ಳಿ, ಶಿವರೆಡ್ಡಿ ವೈ., ಸಂಯೋಜನಾಧಿಕಾರಿ ಸಂತೋಷ ನಾವಲಗಿ, ಶಿವಾನಂದ ಮಹಾವಿದ್ಯಾಲಯದ ಕಾರ್ಯದರ್ಶಿ ಪ್ರೊ. ಬಿ.ಎ.ಪಾಟೀಲ, ಆಡಳಿತಾಧಿಕಾರಿ ಪ್ರೊ.ವಿ.ಎಸ್.ತುಗಶೆಟ್ಟಿ, ದತ್ತ ಸಕ್ಕರೆ ಕಾರ್ಖಾನೆ ನಿರ್ದೇಶಕ ಜ್ಯೋತಿಕುಮಾರ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಸ್ವಪ್ನೀಲ ಪಾಟೀಲ, ವೀರಶೈವ ಪಂಚಮಸಾಲಿ ಚಿಕ್ಕೋಡಿ ವಿಭಾಗ ಅಧ್ಯಕ್ಷ ಅಣ್ಣಪ್ಪ ಹಳಿಜೋಳ, ಭಾರತಿ ಬಿದರಿ, ಪ್ರೊ. ಅಶೋಕ ಪಾಟೀಲ, ಪ್ರೊ.ಎಸ್.ಎಂ.ಘೋರ್ಪಡೆ, ಪ್ರೊ.ವಿ.ವಿ. ಪಾಟೀಲ, ಪ್ರೊ.ಎಸ್.ಎಸ್. ಫಡತರೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net