ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ

CTDUDOGA MELA-----......
Published on

ಚಿತ್ರದುರ್ಗ: ನಗರದ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯವಿತು.

ಉದ್ಯೋಗಾಕಾಂಕ್ಷಿಗಳು ಕೆಲಸಗಳ ಬಗ್ಗೆ ಕಂಪನಿಗಳಿಂದ ಮಾಹಿತಿ ಪಡೆದು, ಸ್ವ-ವಿವರ ಸಲ್ಲಿಸಿದರು. ನೋಂದಾಯಿಸಿದ್ದ 1662 ಅಭ್ಯರ್ಥಿಗಳ ಪೈಕಿ 1478 ಮಂದಿ ಸಂದರ್ಶನಕ್ಕೆ ಹಾಜರಾದರು.

829 ಜನ ನೇಮಕಾತಿಗೆ ಅರ್ಹತೆ ಗಿಟ್ಟಿಸಿಕೊಂಡರು. ಈ ಪೈಕಿ 272 ಮಂದಿ ಸ್ಥಳದಲ್ಲೇ ನೇಮಕಾತಿ ಪತ್ರಪಡೆದರು. 572 ಅಭ್ಯರ್ಥಿಗಳು ಒಂದೆರಡು ವಾರದೊಳಗೆ ನೇಮಕ ಪತ್ರ ಪಡೆಯಲಿದ್ದಾರೆ. ಸ್ಥಳದಲ್ಲಿ ಕಂಪನಿಗಳ ಹೆಸರು, ಉದ್ಯೋಗ, ವಿದ್ಯಾರ್ಹತೆ ಇತ್ಯಾದಿ ಮಾಹಿತಿ ಪ್ರದರ್ಶಿಸಲಾಗಿತ್ತು.

ಮೇಳ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಮಾತನಾಡಿ, ಜಿಲ್ಲೆಯಲ್ಲಿರುವ ಸಾಕಷ್ಟು ಪ್ರತಿಭಾವಂತ ಯುವಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶ ಒದಗಿಸುವಂತೆ ನಾನಾ ಕಂಪನಿಗಳ ಪ್ರತಿನಿಧಿಗಳಿಗೆ ಮನವಿ ಮಾಡಿದರು.

ಸರ್ಕಾರ ಜಾರಿಗೊಳಿಸಿದ ಐದು ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಉದ್ಯೋಗ ಹುಡುಕಾಟಕ್ಕೆ ಅನುಕೂಲವಾಗಿದೆ. ಅರ್ಜಿ ಹಾಕಲು, ಸಂದರ್ಶನಕ್ಕೆ ಹೋಗಿ ಬರಲು ನೆರವಾಗಿದೆ ಎಂದು ಉದ್ಯೋಗಾಂಕ್ಷಿಗಳು ಹೇಳುತ್ತಿದ್ದಾರೆ. ಮೇಳದಲ್ಲಿ ಭಾಗವಹಿಸಿರುವ 50 ಕ್ಕೂ ಹೆಚ್ಚು ಕಂಪನಿಗಳು ಯುವಜನರ ಮುಂದಿನ ಜೀವನೋಪಾಯಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಮೇಳದಲ್ಲಿ 5 ಸಾವಿರ ಉದ್ಯೋಗ ಒದಗಿಸುವ ಗುರಿ ಇದ್ದು, ಅದನ್ನೂ ಮೀರಿದ ಸಾಧನೆ ಆಗಬೇಕು. ಅಭ್ಯರ್ಥಿಗಳು ಕೂಡ ಈ ಅವಕಾಶ ಸದುಪಯೋಗ ಮಾಡಿಕೊಳ್ಳಬೇಕು ಎಂದು ಆಶಿಸಿದರು. ಇದೇ ವೇಳೆ ಐವರು ಅಭ್ಯರ್ಥಿಗಳಿಗೆ ಸಾಂಕೇತಿಕವಾಗಿ ನೇಮಕ ಪತ್ರಗಳನ್ನು ವಿತರಿಸಿದರು.

ಶಾಸಕರಾದ ಡಾ.ಎಂ. ಚಂದ್ರಪ್ಪ, ಟಿ. ರಘುಮೂರ್ತಿ,ಕೆ.ಸಿ.ವೀರೇಂದ್ರಪಪ್ಪಿ, ಎಂಎಲ್‌ಸಿ ಡಿ.ಟಿ. ಶ್ರೀನಿವಾಸ್,ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್‌ಎಂ.ಎನ್. ಹೆಗಡೆ, ಜಿಲ್ಲಾಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಡಿಸಿ ಟಿ. ವೆಂಕಟೇಶ್, ಜಿಪಂ ಸಿಇಒ ಎಸ್.ಜೆ. ಸೋಮಶೇಖರ್, ಸಿಪಿಒ ಸಿ.ಎಸ್. ಗಾಯತ್ರಿ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಟಿ. ವೇಮಣ್ಣ, ವಿಶೇಷ ಭೂ ಸ್ವಾಧೀನಾಧಿಕಾರಿ ವೆಂಕಟೇಶ್‌ನಾಯಕ್, ಕೆ. ಜಗದೀಶ್ ಮತ್ತಿತರರು ಇದ್ದರು.

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲಾಭಿವೃದ್ಧಿ ನಿಗಮ, ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಕೌಶಲ ಮಿಷನ್ ಸಂಯುಕ್ತಾಶ್ರಯದಲ್ಲಿ ಮೇಳ ಆಯವೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net