ಉದ್ಯೋಗ ಮೇಳ ಜ. ೧೯ಕ್ಕೆ

10 ckm 7 ajeesh
ಎವಿಎಸ್ ಎಜುಕೇಷನ್ ಟ್ರಸ್ಟ್ ಸಂಸ್ಥೆಯ ಉಪಾಧ್ಯಕ್ಷ ಅಜೇಶ್ ವಿ.ಎಸ್
Published on

ಚಿಕ್ಕಮಗಳೂರು: ತರೀಕೆರೆ ಮತ್ತು ಚಿಕ್ಕಮಗಳೂರು ಎವಿಎಸ್ ಕಾಲೇಜು ಆಫ್ ಎಜುಕೇಷನ್ ಬಿಇಡಿ ಹಾಗೂ ಉತ್ತರ ಕನ್ನಡ ಜಿಲ್ಲಾ ಶಿಕ್ಷಕ-ಶಿಕ್ಷಕಿಯರ ನಿರಂತರ ಸಹಾಯವಾಣಿ ಸಹಯೋಗದಲ್ಲಿ ಜ. ೧೯ರಂದು ಬೆಳಗ್ಗೆ ೯ ಗಂಟೆಗೆ ಬೃಹತ್ ಉದ್ಯೋಗ ಮೇಳ ೨೦೨೫ನ್ನು ಚಿಕ್ಕಮಗಳೂರು ಕೆ.ಎಂ ರಸ್ತೆಯ ಮಹಾಲಕ್ಷ್ಮಿ ದೇವಸ್ಥಾನದ ಎದುರು ಇದರುವ ಎವಿಎಸ್ ಎಜುಕೇಷನ್ ಟ್ರಸ್ಟ್ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಅಜೇಶ್ ವಿ.ಎಸ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯೋಗವಂತ ಹಾಗೂ ಸ್ವಾವಲಂಬಿ ಸಮಾಜ ನಿರ್ಮಾಣದ ಸಂಕಲ್ಪದೊAದಿಗೆ ರಾಜ್ಯಾದ್ಯಂತ ಆಯಾ ಜಿಲ್ಲೆಯಲ್ಲಿ ಉಂಟಾಗಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಉದ್ಯೋಗ ಆಕಾಂಕ್ಷಿಗಳಿಗೆ ಸ್ಥಳದಲ್ಲಿಯೇ ಉದ್ಯೋಗದ ನೇಮಕಾತಿ ಆಯ್ಕೆ ಪತ್ರವನ್ನು ನೀಡಲಾಗುವುದು ಎಂದು ಹೇಳಿದರು.

ಉದ್ಯೋಗ ಮೇಳದ ಉದ್ಘಾಟನೆಯನ್ನು ಶಾಸಕ ಎಚ್.ಡಿ ತಮ್ಮಯ್ಯ ನೆರವೇರಿಸುವರು. ಗೌರವಾಧ್ಯಕ್ಷ ಗಣಪತಿ ಭಟ್ಟ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಿ.ಟಿ.ರವಿ, ಎಸ್.ಎಲ್ ಭೋಜೇಗೌಡ, ಎಂ.ಎಲ್ ಮೂರ್ತಿ, ಎನ್.ಎಂ ಲೋಕೇಶ್, ಬಿಇಡಿ ಕಾಲೇಜಿನ ಪ್ರಾಚಾರ್ಯ ಅಶೋಕ್ ಮಟ್ಟಿಮನೆ, ಪ್ರಮುಖರಾದ ಖಲೀಮ್.ಎಸ್, ವಿಶಾಲ್.ಎಸ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಈ ಕಾರ್ಯಕ್ರಮದಲ್ಲಿ ಬೆಂಗಳೂರು, ಮಂಗಳೂರು, ಗೋವಾದಿಂದ ೩೦ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಹಾಗೂ ರಾಜ್ಯಾದ್ಯಂತ ಇರುವ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಭಾಗವಹಿಸುತ್ತಿವೆ. ಈಗಾಗಲೇ ಬಾಷ್, ಅಮೇಜಾನ್, ಓ ಪೌಂಡೇಷನ್, ರಾಯಲ್ ಮಾರ್ಟ್ಸ್, ಮ್ಯಾಜಿಕ್ ಬಸ್, ಎಕ್ಸಿಸ್ ಬ್ಯಾಂಕ್, ಟೊಯೋಟ, ಸನ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ಸೇರಿದಂತೆ ಹಲವಾರು ಸಂಸ್ಥೆಗಳು ಭಾಗವಹಿಸುವುದನ್ನು ದೃಢಪಡಿಸಿವೆ ಎಂದು ಹೇಳಿದರು.

ಈ ಉದ್ಯೋಗ ಮೇಳದಲ್ಲಿ ೭ನೇ ತರಗತಿಯಿಂದ ಯಾವುದೇ ಪದವಿ ಪಡೆದವರು ಶೈಕ್ಷಣಿಕ ದಾಖಲೆ, ಆಧಾರ್‌ಕಾರ್ಡ್ ಜೆರಾಕ್ಸ್ ಪ್ರತಿ, ೫ ಬಯೋಡೆಟಾ ದಾಖಲೆಗಳೊಂದಿಗೆ ಭಾಗವಹಿಸಬಹುದಾಗಿದೆ. ಪ್ರವೇಶಕ್ಕೆ ಇದಕ್ಕೆ ಯಾವುದೇ ಶುಲ್ಕವಿರುವುದಿಲ್ಲ. ಹೊರಗಿನಿಂದ ಬರುವ ಅಭ್ಯರ್ಥಿಗಳಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಆಗಮಿಸುವ ಮೂಲಕ ಮೇಳದ ಉಪಯೋಗ ಪಡೆದುಕೊಳ್ಳಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮುಖ್ಯಸ್ಥರಾದ ವಿಶ್ವನಾಥ ಎಸ್.ಗೌಡ, ಮಂಜುನಾಥ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net