ಉದ್ಯೋಗ ಮೇಳ 18 ರಂದು

download
Published on

ಬೀದರ್: ನೀಲಗಿರಿ ಸಂಸ್ಥೆ ಹಾಗೂ ಬಿ.ವಿ. ಭೂಮರಡ್ಡಿ ಕಾಲೇಜು ಸಹಯೋಗದಲ್ಲಿ ಇಲ್ಲಿಯ ಬಿ.ವಿ. ಭೂಮರಡ್ಡಿ ಕಾಲೇಜಿನಲ್ಲಿ ಏಪ್ರಿಲ್ 18 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರ ವರೆಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಮಹಿಂದ್ರಾ ಆ್ಯಂಡ್ ಮಹಿಂದ್ರಾ, ಭಾರತ ಫೈನಾನ್ಸ್ ಕನ್‍ಕ್ಲೂಸನ್ ಲಿಮಿಟೆಡ್, ಕಾರ್ಪೊನೆಂಟ್ ಸಾಫ್ಟ್ ಸೊಲೊಷನ್ಸ್, ಟೊಯೊಟಾ ಕಿರ್ಲೋಸ್ಕರ್ ಮೋಟರ್, ಎಚ್‍ಡಿಎಫ್‍ಸಿ ಬ್ಯಾಂಕ್, ಲೈನೇಜ್ ಪವರ್ ಪ್ರೈವೇಟ್ ಲಿಮಿಟೆಡ್, ಕ್ಯಾಪ್‍ಜೆಮಿನಿ, ಶಾಹೀನ್ ಕಾಲೇಜು, ಸರೋವರ್ ಹೊಟೇಲ್ ಆ್ಯಂಡ್ ರೆಸಾಟ್ರ್ಸ್ ಸೇರಿದಂತೆ 20 ಕಂಪನಿ ಹಾಗೂ ಸಂಸ್ಥೆಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ ಎಂದು ನೀಲಗಿರಿ ಸಂಸ್ಥೆಯ ಸಂಸ್ಥಾಪಕ ಸಾವಂತ ಸಾಗರ್ ತಿಳಿಸಿದ್ದಾರೆ.
ಅರ್ಹರಿಗೆ ಶಿಕ್ಷಕ, ಟೇಲಿ ಕಾಲರ್, ಕಂಪ್ಯೂಟರ್ ಆಪರೇಟರ್, ರಿಸಿಪ್ಶನಿಸ್ಟ್, ಐಟಿಐ ಅಪ್ರೆಂಟಿಸ್, ರೆಸಿಡೆನ್ಶಿಯಲ್ ಮ್ಯಾನೇಜರ್,  ಗ್ರುಪ್ ಲೋನ್ ಆಫಿಸರ್, ಸೆಕ್ಯುರಿಟಿ ಗಾರ್ಡ್ ಮತ್ತಿತರ ಹುದ್ದೆಗಳು ದೊರಕಲಿವೆ. ಎಸ್ಸೆಸ್ಸೆಲ್ಸಿಯಿಂದ ಪದವಿ ವರೆಗಿನ ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಬಹುದು ಎಂದು ಹೇಳಿದ್ದಾರೆ.
ಜಿಲ್ಲೆಯ ನಿರುದ್ಯೋಗಿ ಅಭ್ಯರ್ಥಿಗಳು ಮೇಳದ ಲಾಭ ಪಡೆದುಕೊಳ್ಳಬೇಕು. ಹೆಸರು ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ನೀಲಗಿರಿ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಆಶಾರಾಣಿ (ಮೊ: 8867805519), ಸಾವಂತ್ ಸಾಗರ್ (7259000818), ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜು ಪ್ರಾಚಾರ್ಯ ಡಾ. ಪಿ. ವಿಠ್ಠಲ ರೆಡ್ಡಿ (9448584979) ಅಥವಾ ಉಪ ಪ್ರಾಚಾರ್ಯ ಪ್ರೊ. ಅನಿಲಕುಮಾರ ಆಣದೂರೆ (9448678002) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net