ಉದ್ಯೋಗ ಪಡೆಯಲು ಅಂಕಗಳಿಕೆ ಅಗತ್ಯ

18-22
ಹುಕ್ಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರನ್ನು ಸತ್ಕರಿಸಲಾಯಿತು. ವಿರೂಪಾಕ್ಷಿ ಪಾಟೀಲ, ರಾಜು ಮುನ್ನೋಳಿ, ಪಿ.ಜಿ.ಕೊಣ್ಣೂರ, ಡಾ. ಈರಣ್ಣ ಭೂಸ್ಥಳ್ಳಿ ಇತರರಿದ್ದರು.
Published on

ಹುಕ್ಕೇರಿ, ಬೆಳಗಾವಿ: ಉದ್ಯೋಗ ಪಡೆಯಲು ಉತ್ತಮ ಅಂಕಗಳಿಕೆ ಜತೆಗೆ ಸಂದರ್ಭೋಚಿತ ಜಾಣತನ ಅವಶ್ಯ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ 2022-23ನೇ ಶೈಕ್ಷಣಿಕ ಸಾಲಿನ ವಿವಿಧ ಸಂಘಗಳ ಕಾರ್ಯ ಚಟುವಟಿಕೆ ಉದ್ಘಾಟಿಸಿ ಅವರು ಮಾತನಾಡಿದರು.
ವ್ಯವಹಾರಿಕ ಜಗತ್ತಿನಲ್ಲಿ ಆಂಗ್ಲ ಭಾಷೆಯ ಜ್ಞಾನ ಅವಶ್ಯವಾಗಿದ್ದು, ವಿದ್ಯಾರ್ಥಿಗಳು ಆದ್ಯತೆ ನೀಡಿ ಕಲಿಯಬೇಕು. ವಿದ್ಯಾರ್ಥಿಗಳು ನೌಕರರಾಗುವುದಕ್ಕಿಂತ ಉದ್ಯೋಗದಾತರಾಗಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಾಗಿ ಅಧ್ಯಯನ ಮಾಡುತ್ತಿರುವ ಕಾರಣದಿಂದ ಕಾಲೇಜಿಗೆ 10 ಕಂಪ್ಯೂಟರ್ ನೀಡುವುದಾಗಿ ತಿಳಿಸಿದರು.

ಪ್ರಾಚಾರ್ಯ ವಿರೂಪಾಕ್ಷಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯ ರಾಜು ಮುನ್ನೋಳಿ, ನಿವತ್ತ ಉಪನ್ಯಾಸಕ ಪಿ.ಜಿ.ಕೊಣ್ಣೂರ, ಉಪನ್ಯಾಸಕ ಡಾ. ಈರಣ್ಣ ಭೂಸ್ಥಳಿ, ರಾಜೇಶ ಕುಂಬಾರ, ಪ್ರೊ. ಮಲ್ಲಿಕಾರ್ಜುನ ದಲಾಲ, ವೈ.ಎಸ್. ಢಂಗೆ, ಬಿ.ಎಂ.ವಾಸನ್, ರೇಖಾ ನೀರಲಗಿ, ಸುಹೇಲ್ ಸತ್ತೀಕರ ಮತ್ತು ಲಕ್ಷ್ಮಣ ಪಟಾಯತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net