

ಚಾಮರಾಜನಗರ: ಜ್ಞಾನದೀಪ ಟ್ರಸ್ಟ್ ಟ್ರಸ್ಟ್ ವತಿಯಿಂದ ಚಾಮರಾಜೇಶ್ವರ ಉದ್ಯಾನದಲ್ಲಿ 100 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷ ಸುರೇಶ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಜ್ಞಾನದೀಪ ಟ್ರಸ್ಟ್‌ನಿಂದ ಪರಿಸರ ಸಂರಕ್ಷಣೆ ಹಿನ್ನೆಲೆಯಲ್ಲಿ 100 ಗಿಡಗಳನ್ನು ನೆಡುವ ಕಾರ್ಯಕ್ರಮ ಸ್ವಾಗತಾರ್ಹ, ಪ್ರತಿಯೊಬ್ಬರೂ ಪರಿಸರ ಉಳಿಸುವ ಕಾರ್ಯಕ್ಕೆ ಕೈಜೋಡಿಸಬೇಕು, ನಗರದ ಪ್ರಮುಖ ಮೂರು ಉದ್ಯಾನಗಳ ಅಭಿವೃದ್ಧಿಗೆ ನಗರಸಭೆಯಲ್ಲಿ ಅನುದಾನ ಮೀಸಲಿಡಲಾಗಿದೆ ಎಂದರು.
ಪರಿಸರ ಪ್ರೇಮಿ ಸಿ.ಎಂ. ವೆಂಕಟೇಶ್ ಮಾತನಾಡಿ, ಮನುಷ್ಯ ಹುಟ್ಟುತ್ತಾನೆ, ಸಾಯುತ್ತಾನೆ. ಅದರ ಮದ್ಯೆ ಸಮಾಜಕ್ಕೆ ಒಳಿತು ಮಾಡಬೇಕು. ಜ್ಞಾನದೀಪ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಆರ್.ಪಿ. ನಂಜುಂಡಸ್ವಾಮಿ ನಗರದ ಚಾಮರಾಜೇಶ್ವರ ಉದ್ಯಾನದಲ್ಲಿ 100 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಗಿಡಗಳ ನೆಡುವ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಪ್ರಶಂಸನೀಯ ಎಂದರು.
ಜ್ಞ್ಞಾನದೀಪ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಆರ್.ಪಿ.ನಂಜುಂಡಸ್ವಾಮಿ ಮಾತನಾಡಿ, ಚಾಮರಾಜೇಶ್ವರ ದೇವಾಲಯ ಉದ್ಯಾನ ಮೂಲಸೌಕರ್ಯದಿಂದ ಹಿಂದುಳಿದಿದೆ. ಮುಂದಿನ 5 ವರ್ಷಗಳವರೆಗೆ ಉದ್ಯಾನ ಅಭಿವೃದ್ಧಿಪಡಿಸುವ ಸಂಬಂಧ ದತ್ತು ಪಡೆದು. ನಿರ್ವಹಣೆ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಿ,ಎಂ.ನರಸಿಂಹಮೂರ್ತಿ ಮಾತನಾಡಿ, ಜ್ಞಾನದೀಪ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಆರ್.ಪಿ.ನಂಜುಂಡಸ್ವಾಮಿ ಅವರು, ಶಿಕ್ಷಣದ ಜತೆಗೆ ಸಮಾಜ ಸೇವೆಗೂ ಮುಂದಾಗಿದ್ದಾರೆ. ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಲಿ ಎಂದರು. ನಗರಸಭೆ ಸದಸ್ಯೆ ನೀಲಮ್ಮ, ಮಾಜಿ ಸದಸ್ಯ ಮಹದೇವಯ್ಯ, ನಾಗರಾಜು, ಮಹದೇವಯ್ಯ, ಜಯರಾಂ, ಮೋಹನ್, ಜೆ,ವಿ,ವೀರಭದ್ರಪ್ಪ, ರಾಜೇಂದ್ರ, ಸಿದ್ದರಾಜು, ಮಂಜುನಾಯಕ್, ಮುಖ್ಯಶಿಕ್ಷಕಿ ಜಯಲಕ್ಷ್ಮೀ ಇತರರು ಇದ್ದರು.
ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದ ಉದ್ಯಾನದಲ್ಲಿ ಭಾನುವಾರ ಸಸಿ ನೆಡಲಾಯಿತು. ಆರ್.ಪಿ.ನಂಜುಂಡಸ್ವಾಮಿ, ಸಿ.ಎಂ.ನರಸಿಂಹಮೂರ್ತಿ, ಸುರೇಶ್, ಸಿ.ಎಂ.ವೆಂಕಟೇಶ್, ನೀಲಮ್ಮ, ಮಹದೇವಯ್ಯ ಇತರರಿದ್ದರು.