

ಚಿತ್ರದುರ್ಗ: ಗಾಂಧಿ ಜಯಂತಿ, ಪ್ರಧಾನಿ ಮೋದಿ ಜನ್ಮದಿನಾಚರಣೆ ಸೇವಾ ಪಾಕ್ಷಿಕ ಕಾರ್ಯಕ್ರಮದಡಿ ಬಿಜೆಪಿ ನಗರ ಘಟಕದಿಂದ ಐಯುಡಿಪಿ ಬಡಾವಣೆಯ ಗಣಪತಿ ದೇಗುಲದ ಉದ್ಯಾನದಲ್ಲಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಚಾಲನೆ ನೀಡಿದರು. ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ, ನಗರಾಧ್ಯಕ್ಷ ನವೀನ್ ಚಾಲುಕ್ಯ, ಪದಾಧಿಕಾರಿಗಳಾದ ಸಂಪತ್‌ಕುಮಾರ್, ಶ್ಯಾಮಣ್ಣ, ಶಿವಪ್ರಕಾಶ್, ಮಾಧುರಿ ಗಿರೀಶ್, ನಾಗರಾಜ್ ಬೇದ್ರೆ, ನಗರಸಭೆ ಸದಸ್ಯರಾದ ಶ್ರೀನಿವಾಸ್, ಹರೀಶ್, ಮುಖಂಡರಾದ ತಿಮ್ಮಣ್ಣ, ರವಿಕುಮಾರ್, ರಮೇಶ್ ಆಚಾರ್, ಬಸಮ್ಮ, ಚಂದ್ರು, ರಾಮು, ಅರುಣಾ ಕುಮಾರಿ, ಕಿರಣ್, ಶಂಭು ಇತರರಿದ್ದರು.