

ಕನಕಪುರ: ದೇಶದ ಅಭಿವೃದ್ಧಿಗೆ ಬಂಡವಾಳಶಾಹಿಗಳು ಅನಿವಾರ್ಯವಾದರೆ ಆ ಉದ್ಯಮವನ್ನು ಉಳಿಸಿ ಬೆಳೆಸುವ ಕರ್ತವ್ಯ ಕಾರ್ಮಿಕರ ಮೇಲಿದೆ. ಈ ಇಬ್ಬರಲ್ಲೂ ಯಾವುದೇ ವ್ಯತ್ಯಾಸವಾಗದಂತೆ ನಡೆದುಕೊಂಡು ಬಂದರೆ ಉದ್ಯಮಗಳು ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದು ದೇಗುಲಮಠದ ಚನ್ನಬಸವ ಸ್ವಾಮೀಜಿ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ವಿಕಾಸ ಕಟ್ಟಡ ಕಾರ್ಮಿಕರ ಸಂಘದಿಂದ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಮತ್ತು ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಉದ್ಯಮಗಳು ಹೆಚ್ಚುಹೆಚ್ಚು ಬೆಳೆದಂತೆ ಕಾರ್ಮಿಕರ ಜೀವನವೂ ಅಷ್ಟೇ ಸುಗಮವಾಗಿ ಸಾಗುತ್ತದೆ. ಮಾಲೀಕರು ಕಾರ್ಮಿಕರ ಶ್ರಮಕ್ಕೆ ತಕ್ಕಂತೆ ಸವಲತ್ತುಗಳನ್ನು ನೀಡಬೇಕು ಎಂದು ಹೇಳಿ, ಕನಕಪುರದಲ್ಲಿ ಹೊಸದಾಗಿ ಪ್ರಾರಂಭವಾಗಿರುವ ಕಟ್ಟಡ ಕಾರ್ಮಿಕರ ಸಂಘದ ಬೆಳವಣಿಗೆಗೆ ಶುಭ ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿ, ಕಾರ್ಮಿಕ ಸಂಘಟನೆ ಒಂದೇ ಅಲ್ಲ, ಎಲ್ಲ ರಂಗಗಳಲ್ಲೂ ಸಂಘಗಳು ಹುಟ್ಟುತ್ತವೆ, ಬೆಳೆಯುತ್ತವೆ ನಂತರ ತಟಸ್ಥವಾಗುತ್ತವೆ. ಈಗ ಕಾರ್ಮಿಕರ ಹಿತದೃಷ್ಟಿಯಿಂದ ಉದ್ಘಾಟನೆಗೊಂಡಿರುವ ಕಾರ್ಮಿಕರ ಸಂಘವು ಸಂಘಟನೆಗಳ ಮೂಲಕ ಕಾರ್ಮಿಕರನ್ನು ಒಗ್ಗೂಡಿಸಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. ಬೇರೆ ಸಂಘಗಳಿಗಿಂತ ವಿಭಿನ್ನವಾಗಿರುವ ಕಾರ್ಮಿಕರ ಸಂಘದಲ್ಲಿ ಎಲ್ಲ ಕೂಲಿ, ಕಟ್ಟಡ ಕಾರ್ಮಿಕರು ಸದಸ್ಯತ್ವ ಪಡೆಯಬೇಕು. ಶ್ರಮ ಜೀವಿಗಳಿಗೆ ಸಂಘ ಸರ್ಕಾರದಿಂದ ದೊರೆಯುವಂತಹ ಸವಲತ್ತುಗಳನ್ನು ಕೊಡಿಸಬೇಕು. ಕರೊನಾ ಸ ಂಕಷ್ಟದಲ್ಲಿ ಕಾರ್ಮಿಕರ ನೋವು-ಗಳಿಗೆ ಬಿಜೆಪಿ ಸರ್ಕಾರ ಸ್ಪಂದಿಸಿಲ್ಲ. ಅವರ ಖಾತೆಗಳಿಗೆ ಹಣ ಹಾಕುತ್ತೇವೆಂದು ಬೆರಳೆಣಿಕೆಯಷ್ಟು ಜನರ ಖಾತೆಗಳಿಗೆ ಹಣ ಹಾಕಿ ಸಾವಿರಾರು ಕಾರ್ಮಿಕರನ್ನು ಬೀದಿಪಾಲು ಮಾಡಿತ್ತು. ಕಾರ್ಮಿಕರು ಸಂಗಟಿತರಾಗಿ ಸವಲತ್ತು ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಧಮ್ಮದಿವಿಗೆ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ್ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಖಋತ ಕೀರಣಗೆರೆ ಜಗದೀಶ್ ಮಾತನಾಡಿದರು.
ಸಮಾರಂಭಕ್ಕೂ ಮುನ್ನ ನಗರದ ಎಂ.ಎಸ್.ಪ್ಯಾಲೇಸ್ ಮುಂಭಾಗದಿಂದ ಎಂ.ಜಿ.ರಸ್ತೆ, ಕೆ.ಎನ್.ಎಸ್. ಸರ್ಕಲ್, ಸಿ.ಬಿ. ಸರ್ಕಲ್ ಮೂಲಕ ಅಂಬೇಡ್ಕರ್ ಭವನದವರೆಗೆ ವಿವಿಧ ಸಾಂಸತಿಕ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಕಲಾತಂಡಗಳ ಮೆರವಣಿಗೆಗೆ ನಿವೃತ್ತ ಹೃದಯ ತಜ್ಞ ಡಾ.ಬೊಮ್ಮಯ್ಯ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.
ಹಿರಿಯ ನಿವೃತ್ತ ಕಾರ್ಮಿಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಶಿವಸ್ವಾಮಿ, ಕಾರ್ಯದರ್ಶಿ ದೇವರಾಜಸ್ವಾಮಿ, ನಗರಸಭೆ ಅಧ್ಯಕ್ಷ ಕೆ.ಎನ್.ವೆಂಕಟೇಶ್, ವೃತ್ತ ನಿರೀಕ್ಷಕ ಟಿಟಿ ಕೃಷ್ಣ, ಬಿಇಒ ಜಯಲಕ್ಷಿ$್ಮ, ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ನಾಗರಾಜು, ಬಿಜೆಪಿ ಮಾಜಿ ಅಧ್ಯಕ್ಷ ಹೋಟೆಲ್ ನಾಗರಾಜು, ನಗರಸಭಾ ಸದಸ್ಯರಾದ ಕಿರಣ್, ಸ್ಟುಡಿಯೋಚಂದ್ರು, ನಾಗರಾಜು, ಜಾನಪದ ಅಕಾಡೆಮಿ ಸದಸ್ಯ ಕಾಳಯ್ಯ ಹಲವರು ಉಪಸ್ಥಿತರಿದ್ದರು.