ಉದ್ಯಮಿಯಾಗುವುದು ಲೇಸು

CTD SJM.......
Published on

ಚಿತ್ರದುರ್ಗ:ಉದ್ಯೋಗಿಯಾಗುವುದಕ್ಕಿಂತ ಉದ್ಯಮಿಗಳಾಗುವ ನಿಟ್ಟಿನಲ್ಲಿ ತಮ್ಮ ಗುರಿ ಇರಬೇಕೆಂದು ಎಸ್‌ಜೆಎಂ ತಾಂತ್ರಿಕ ಮಹಾ ವಿದ್ಯಾಲಯ ದ ಪ್ರಾಚಾರ‌್ಯ ಡಾ.ಪಿ.ಬಿ.ಭರತ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕಾಲೇಜಿನಲ್ಲಿ ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಶುಕ್ರವಾರ ಏರ್ಪ ಡಿಸಿದ್ದ ಹೇಗೆ ಉದ್ಯಮಿಯಾಗುವುದು ಎಂಬ ಒಂದು ದಿನದ ಕಾರ‌್ಯಾಗಾರದಲ್ಲಿ ಮಾತನಾಡಿ,ಉದ್ಯಮಿಯಾಗುವ ಗುರಿಯತ್ತ ಸಾಗಲು ಇಂಥ ಕಾರ‌್ಯಾಗಾರಗಳು ಸಹಕಾರಿಯಾಗಲಿವೆ ಎಂದರು. ಗಣಕ ವಿಜ್ಞಾನ ವಿಭಾಗ ಪ್ರಭಾರ ಮುಖ್ಯಸ್ಥ ಟಿ.ವಿ.ಅರವಿಂದ್,ಸಂಪನ್ಮೂಲ ವ್ಯಕ್ತಿ ಎಂ.ವಿ. ಮ ಹಾಂತಸ್ವಾಮಿ ಮಾತನಾಡಿದರು. ಡಾ.ಎ.ಎಂ.ರಾಜೇಶ್,ಪ್ರೊ.ಪೋರಾಳ್‌ನಾಗರಾಜ್,ಪ್ರೊ.ರಮೇಶ್,ಪ್ರೊ.ಕೆ.ಅರ್.ಅಂಬಿಕಾ, ಪ್ರೊ.ಕೆ.ಆರ್. ಸಾಗರ್ ಇದ್ದರು. ದಿವ್ಯಾ ಸ್ವಾಗತಿಸಿ,ಚನ್ನಬಸಯ್ಯ ವಂದಿಸಿದರು.ರುಕ್ಮಿಣಿ ಪ್ರಾರ್ಥಿಸಿದರು. ಅಮರೀನ್‌ಶಾಮ ನಿರೂಪಿಸಿದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net