ಉದ್ಯಮಿಯ ಸಹೋದರನ ಮನೆಯಲ್ಲಿ ಕಳ್ಳತನ

house-Theft
Published on

ಮೈಸೂರು: ಗ್ರಾಮದ ಹಬ್ಬಕ್ಕೆ ತೆರಳಿದ್ದ ರಿಯಲ್ ಎಸ್ಟೇಟ್ ಉದ್ಯಮಿಯ ಸಹೋದರನ ಮನೆಯಲ್ಲ್ಲಿದ್ದ 34.67 ಲಕ್ಷ ರೂ. ನಗದು, 7 ಲಕ್ಷ ರೂ. ಮೌಲ್ಯದ 89 ಗ್ರಾಂ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ.

ವಿಜಯನಗರ 3ನೇ ಹಂತದಲ್ಲಿರುವ ಬಸವರಾಜು ಎಂಬುವರ ಮನೆಯಲ್ಲಿ ಕಳ್ಳತನ ಆಗಿದೆ. ರಿಯಲ್ ಎಸ್ಟೇಟ್ ಉದ್ಯಮಿ ದೀಪಕ್ ಅವರು ತಮ್ಮ ಉದ್ಯಮದಿಂದ ಗಳಿಸಿದ ಹಣವನ್ನು ಸೋದರ ಬಸವರಾಜು ಅವರ ಮನೆಯಲ್ಲಿ ಇರಿಸಿದ್ದರು.

ಚಾಮರಾಜನಗರ ಶಿವನಸಮುದ್ರದಲ್ಲಿ ಗ್ರಾಮದ ಹಬ್ಬ ಇದ್ದ ಕಾರಣ ಅಲ್ಲಿಗೆ ಇವರು ತೆರಳಿದ್ದರು. ಹಬ್ಬ ಮುಗಿಸಿ ಮಾ. 24ರಂದು ಹಿಂದಿರುಗಿದಾಗಲೇ ಇದು ಗೊತ್ತಾಗಿದೆ.

ಮನೆ ಬಾಗಿಲು ಕಿಟಕಿ ತೆರೆದ ಸ್ಥಿತಿಯಲ್ಲಿತ್ತು. ಒಳಗೆ ಪ್ರವೇಶಿಸಿ ಪರಿಶೀಲಿಸಿದಾಗ ನಗದು, ಚಿನ್ನಾಭರಣ ನಾಪತ್ತೆಯಾಗಿತ್ತು. ಈ ಕುರಿತು ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net