ಉದ್ಯಮಶೀಲತಾ ಶೃಂಗಸಭೆ ಫೆ. 1ರಿಂದ

h28-Tie
Published on

ಹುಬ್ಬಳ್ಳಿ: ಕನ್ನಡದ ನಂ.1 ದಿನ ಪತ್ರಿಕೆ ‘ವಿಜಯವಾಣಿ’, ದಿಗ್ವಿಜಯ 247 ನ್ಯೂಸ್ ಚಾನೆಲ್ ಮಾಧ್ಯಮ ಸಹಯೋಗ ಹಾಗೂ ವರ್ಲ್ಡ್ ಸ್ಕೆ್ವೕರ್, ಕೆಎಲ್​ಇ, ದಿ ಇಂಡಸ್ ಎಂಟರ್​ಪ್ರೀನರ್ಸ್ ವತಿಯಿಂದ ‘ಉದ್ಯಮಶೀಲತಾ ಶೃಂಗಸಭೆ’ (ಟೈಕಾನ್ -2020)ಯನ್ನು ಫೆ. 1 ಮತ್ತು 2ರಂದು ನಗರದ ಹೋಟೆಲ್ ಡೆನಿಸನ್ಸ್​ನಲ್ಲಿ ಏರ್ಪಡಿಸಲಾಗಿದೆ.

ಟೈ ಹುಬ್ಬಳ್ಳಿ ಅಧ್ಯಕ್ಷ ಶಶಿಧರ ಶೆಟ್ಟರ್, ಸಂಯೋಜಕ ವಿಜೇಶ ಸೈಗಲ್ ಅವರು ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಿಸಿದರು.

ಫೆ. 1ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಪ್ರದೀಪ ಶೆಟ್ಟರ್ ಇತರರು ಭಾಗವಹಿಸುವರು. ನಂತರ ಮಹಿಳಾ ಸಮಾವೇಶ ನಡೆಯಲಿದೆ ಎಂದರು.

ಫೆ. 2ರಂದು ಬೆಳಗ್ಗೆ 10.15ಕ್ಕೆ ಸಾಂಖ್ಯ ಲ್ಯಾಬ್ಸ್ ಸಿಇಒ ಪರಾಗ್ ನಾಯಕ್, ಕೆನ್ ಅಗ್ರಿಟೆಕ್ ಎಂ.ಡಿ. ವಿವೇಕ ನಾಯಕ್, ಮೈಕ್ರೋಫಿನಿಷ್ ವಾಲ್ವಸ್ ಚೇರ್ಮನ್ ತಿಲಕ್ ವಿಕಮ್ ಅವರು ‘ಬಿ ಲೋಕಲ್, ಥಿಂಕ್ ಗ್ರೋಬಲ್’, ವಿಷಯದ ಮೇಲೆ ಮಾತಾಡುವರು. 10.45ಕ್ಕೆ ಟೈ ಚೆನ್ನೈ ಅಧ್ಯಕ್ಷ ಸಿ.ಕೆ. ರಂಗನಾಥನ್ ಅವರು ಸಂಶೋಧನೆ, ಸ್ಪೂರ್ತಿದಾಯಕ ಮಾತುಗಳನ್ನಾಡುವರು. 11.30ಕ್ಕೆ ಆದಿತ್ಯ ಬಿರ್ಲಾ ಇನ್ಶೂರೆನ್ಸ್​ನ ಎ. ಬಾಲಸುಬ್ರಹ್ಮಣಿಯನ್ ‘ಉದ್ಯಮದಲ್ಲಿ ಸಂಕಷ್ಟ’ ಎದುರಿಸುವ ಕುರಿತು, ಮಧ್ಯಾಹ್ನ 12ಕ್ಕೆ ಶಿವಾ ಖೇರ್ ಅವರು ಸ್ಪೂರ್ತಿದಾಯಕ, 1 ಗಂಟೆಗೆ ಜಿವಿಕೆ ಪವರ್ ಮತ್ತು ಇನ್​ಫ್ರಾಸ್ಟ್ರಕ್ಚರ್ ನಿರ್ದೇಶಕ ಎ. ಐಸಾಕ್ ಜಾರ್ಜ್ ‘ಸುಸ್ಥಿರ ಉದ್ಯಮ’ದ ಕುರಿತು ಆಶಾದಾಯಕ ಮಾತುಗಳನ್ನಾಡುವರು.

ಮಧ್ಯಾಹ್ನ 2.30ಕ್ಕೆ ವಿಸಿ-100ಎಕ್ಸ್ ಸಂಸ್ಥಾಪಕ ಶಶಾಂಕ ರಂದೇವ್, ಟೈಎನ್​ವೈ ವಿಪಿ ಧರ್ತಿ ದೇಸಾಯಿ, ಬಿಎಸ್​ಇ ಎಲೆವೆಟ್ ಮತ್ತು ಬಿಎಸ್​ಇ ಸಮ್ಮಾನ ಸಿಇಒ ಹೇಮಂತ್ ಗುಪ್ತಾ, ರೋಹನ್ ಕುಲಕರ್ಣಿ ‘ಹೂಡಿಕೆದಾರರ ನೋಟ’ ಕುರಿತು ಸಂವಾದ ನಡೆಸುವರು. ಹು-ಧಾ ಪೊಲೀಸ್ ಆಯುಕ್ತ ಆರ್. ದಿಲೀಪ, ಅನಿಲ್ ಗುಡಿ, ಡಿ. ರಮೇಶ ಕುಮಾರ ‘ಮಿಲಿಟರಿಯಲ್ಲಿ ನಾಯಕತ್ವ ಗುಣದ ಪಾಠ’, ಘೊಡಾವತ್ ಗ್ರುಪ್ ಆಫ್ ಕಂಪನಿ ಸಂಜಯ್ ಘೊಡಾವತ್ ‘ಸ್ವಾನುಭವ’ ಹಂಚಿಕೊಳ್ಳುವರು. ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತ ಆಗಮಿಸುವರು ಎಂದರು. ಎರಡು ದಿನದಲ್ಲಿ ಉದ್ಯಮಶೀಲ ಪರಿಸರ ವ್ಯವಸ್ಥೆ ನಿರ್ವಣವಾಗಲಿದೆ. 600ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸರ್ಕಾರಿ ಶಾಲೆ ಮಕ್ಕಳು ಆಗಮಿಸುವರು. ನವೋದ್ಯಮಿಗಳು ಹಾಗೂ ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ಸಿಗಲು ಅನುಕೂಲ ಕಲ್ಪಿಸಿದ್ದೇವೆ ಎಂದು ವಿವರಿಸಿದರು.

ಈವ್ನಿಂಗ್ ವಿಥ್ ಲೆಜೆಂಡ್ಸ್: ಯೋಗ ಗುರು, ಪತಂಜಲಿಯ ಸಂಸ್ಥಾಪಕ ಬಾಬಾ ರಾಮದೇವ ಗುರೂಜಿ ಅವರು ಫೆ. 2ರಂದು ಸಂಜೆ 6.45ರಿಂದ 8 ಗಂಟೆವರೆಗೆ ನಡೆಯಲಿರುವ ‘ಈವ್ನಿಂಗ್ ವಿಥ್ ಲೆಜೆಂಡ್ಸ್’ ನಲ್ಲಿ ಭಾಗವಹಿಸಿ ಸಂವಾದ ನಡೆಸುವರು. ಉದ್ಯಮಿ ಮೋಹನ್​ದಾಸ್ ಪೈ, ಟಾಟಾ ಕಾಫಿ ಲಿಮಿಟೆಡ್​ನ ಅಧ್ಯಕ್ಷ ಹರೀಶ ಭಟ್ ಭಾಗವಹಿಸುವರು.

ಮಹಿಳಾ ಉದ್ಯಮಿಗಳ ದಿಕ್ಸೂಚಿ ಭಾಷಣ: ಮಹಿಳಾ ಸಮಾವೇಶ ಸಂಯೋಜಕಿ ಶ್ರಾವಣಿ ಪವಾರ್ ಮಾತನಾಡಿ, ಫೆ. 1ರಂದು ನಡೆಯುವ ಮಹಿಳಾ ಸಮಾವೇಶದಲ್ಲಿ ಜಾಗರಣ ಪ್ರಕಾಶ ಲಿ. ಅಧ್ಯಕ್ಷ ಅಪೂರ್ವ ಪುರೋಹಿತ, ಗ್ಲೋಬಲ್ ಅಡ್ಜಸ್ಟ್​ಮೆಂಟ್ ಫೌಂಡೇಷನ್ ಸ್ಥಾಪಕ ಅಧ್ಯಕ್ಷೆ ಡಾ. ರಂಜಿನಿ ಮಣಿಯನ್ ಅವರು ಮಹಿಳೆಯರ ಸಬಲೀಕರಣ, ದುಬೈನ್ ಸೆಂಚುರಿ ಫೈನಾನ್ಷಿಯಲ್, ಇಂಟರ್​ನ್ಯಾಷನಲ್ ಮಾಡೆಲ್ ಸುಶ್ಮಿತಾ ದಿವಾನ್​ಜಿ ಸೌಂದರ್ಯ ಕುರಿತು ಮಾತನಾಡುವವರು. ಜೆಟ್​ಸೆಟ್​ಗೋ ಏವಿಯೇಷನ್ ಸರ್ವೀಸಸ್ ಪ್ರೖೆವೇಟ್ ಲಿಮಿಟೆಡ್ ಸಿಇಒ ಕನಿಕಾ ತೆಕ್ರಿವಾಲ್, ನಟಿ, ಕವಯತ್ರಿ ಪ್ರಿಯಾ ಮಲಿಕ್, ಫೈನ್​ವೈನ್ಸ್​ಮೋರ್ ಡಾಟ್ ಕಾಮ್ ಸಿಇಒ ಧಾರ್ತಿ ದೇಸಾಯಿ , ನವ್ಯಾ ಬಯೋಲಾಜಿಕಲ್ಸ್ ಪ್ರೖೆ. ಲಿ. ಸ್ಥಾಪಕಿ ಮತ್ತು ನಿರ್ದೇಶಕಿ ಡಾ. ಕೆ.ಆರ್. ರಾಜಶ್ರೀ ಭಾಗವಹಿಸುವರು. ಆನ್​ಲೈನ್ ಮೂಲಕ ನೋಂದಣಿ ಮಾಡಬಯಸುವವರು http://tiecon.tiehubli.org/ ಸಂಪರ್ಕಿಸಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net