ಉದ್ಯಮ ನಿಷ್ಠೆ ಕೌಶಲ್ಯ ತರಬೇತಿಗೆ ಒಪ್ಪಂದ

gttc1--04
Published on


ಚಿತ್ರದುರ್ಗ: ಆಟೋಮೊಬೈಲ್‌ವೆಲ್ಡಿಂಗ್ ಮತ್ತು ಆಟೋಮೊಬೈಲ್ ಅಸೆಂಬ್ಲಿ ಟ್ರೇಡ್ ತರಬೇತುದಾರರಿಗೆ ಉದ್ಯಮ ನಿಷ್ಠ ಕೌಶಲ್ಯ ತರಬೇತಿ ನೀಡ ಲು ಜಿಟಿಟಿಸಿ(ಸರ್ಕಾರಿ ಉಪಕರಣಗಾರ ಮತ್ತ ತರಬೇತಿ ಕೇಂದ್ರ)ಹಾಗೂ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನಡುವೆ ಒಪ್ಪಂದ ವಾಗಿದೆ ಎಂದು ಸಂಸ್ಥೆ ಹಿರಿಯ ಉಪಾಧ್ಯಕ್ಷ ಜಿ.ಶಂಕರ ಹೇಳಿದರು.

ತಮ್ಮ ನೇತೃತ್ವದ ತಂಡ ಮಂಗಳವಾರ ಚಳ್ಳಕೆರೆ ಜಿಟಿಟಿಸಿ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ ಒಪ್ಪಂದಕ್ಕೆ ಸಹಿ ಮಾಡಲಾಗಿದೆ.ಮುಂಬರು ವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯಿಂದಲೂ ತರಬೇತಿ ನೀಡಲಾಗುವುದು. ತರಬೇತಿ ಪೂರ್ಣಗೊಳಿಸಿದ ನಂತರ,ಹೊಸದಿಲ್ಲಿ ಯ ಆಟೋಮೋಟಿವ್ ಸ್ಕಿಲ್‌ಡೆವಲಪ್ಮೆಂಟ್ ಕೌನ್ಸಿಲ್ ಜತೆಗೂಡಿ ಪ್ರಮಾಣ ಪತ್ರಕ್ಕಾಗಿ ಪರೀಕ್ಷೆ ನಡೆಸಲಾಗುತ್ತದೆ ಎಂದರು.

ಜಿಟಿಟಿಸಿಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉದ್ಯಮ ನಿಷ್ಠ ಕೌಶಲ್ಯ ತರಬೇತಿಗೆ ಯೋಜನೆ ರೂಪಿಸಲಾಗಿದೆ ಎಂದು ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಎಚ್.ರಾಘವೇಂದ್ರ ತಿಳಿಸಿದರು. ಇದಕ್ಕಾಗಿ ಟಿಕೆಎಂ ಕಂಪನಿ'ಕಲಿಯಿರಿ ಮತ್ತು ಸಂಪಾದಿಸಿ' ಘೋ ಷಣೆಯಡಿ ವಿದ್ಯಾರ್ಥಿಗಳ ಉದ್ಯೋಗ ಸಾಮರ್ಥ್ಯವನ್ನು ಸುಧಾರಿಸಲು ಅವಕಾಶ ಒದಗಿಸಿದೆ ಎಂದರು. ಕರ್ನಾಟಕ ಸರ್ಕಾರದ ಕಾರ್ಖಾ ನೆಗಳು,ಬಾಯ್ಲರ್,ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ನಿರ್ದೇಶಕ ಕೆ.ಶ್ರೀನಿವಾಸ್ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net