ಉದ್ಘಾಟನೆಯಾದ 5 ತಿಂಗಳಲ್ಲೇ ಮೇಲ್ಸೇತುವೆ ಹಾಳು

08 04
Published on

ಚಿಕ್ಕನಹಳ್ಳಿ ಬಳಿ ಕಳಪೆ ಕಾಮಗಾರಿಯಿಂದ ಅಪಘಾತಗಳ ಸಂಖ್ಯೆಯಲ್ಲಿ ಹೆಚ್ಚಳ, ದುರಸ್ತಿಗೆ ಸ್ಥಳಿಯರ ಆಗ್ರಹ

ಶಿರಾ: ತಾಲೂಕಿನ ಚಿಕ್ಕನಹಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಿರುವ ನೂತನ ಮೇಲ್ಸೇತುವೆ ಉದ್ಘಾಟನೆಯಾದ ಐದು ತಿಂಗಳಲ್ಲಿ ಉಬ್ಬು ತಗ್ಗುಗಳು ಸೃಷ್ಟಿಯಾಗಿ ಅಪಘಾತದ ವಲಯವಾಗಿ ಮಾರ್ಪಟ್ಟಿದೆ.

ಸೇತುವೆ ಉದ್ಘಾಟನೆಯಾದ ಐದು ತಿಂಗಳಲ್ಲಿ ಕಳಪೆ ಕಾಮಗಾರಿಯಿಂದಾಗಿ ಮೇಲ್ಸೇತುವೆಯಲ್ಲಿ ಗುಂಡಿ ಬಿದ್ದಿವೆ. ಇದರಿಂದ ಸರಣಿ ಅಪಘಾತ ಉಂಟಾಗಿ, ಹಲವಾರು ಸಾವು ನೋವುಗಳು ಸಂಭವಿಸಿವೆ. ಈ ಬಗ್ಗೆ ಸ್ಥಳಿಯ ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಜನಪ್ರತಿನಿಧಿಗಳು ಪ್ರತಿಭಟನೆ ನಡೆಸಿ ಸರ್ಕಾರದ ಗಮನಕ್ಕೆ ತಂದರೂ ರಾಷ್ಟ್ರೀಯ ಹೆದ್ದಾರಿ

ಪ್ರಾಧಿಕಾರದವರು ಮಾತ್ರ ದುರಸ್ತಿ ಕೈಗೊಳ್ಳಲು ಮುಂದಾಗದಿರುವುದು ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ.

ಏ.4ರಂದುರಾತ್ರಿ ದಾವಣಗೆರೆ ಜಿಲ್ಲೆ ಚನ್ನಗಿರಿ ಮೂಲದ ದಂಪತಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಅಪಘಾತ ಸಂಭವಿಸಿ ಇಬ್ಬರೂ ಮೃತಪಟ್ಟಿದ್ದಾರೆ. ಘಟನೆ ಸಂಭವಿಸಿದ ತಕ್ಷಣವೇ ಸ್ಥಳಿಯರು ಈ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಪೊಲೀಸ್​ ಇಲಾಖೆಯವರು ಈಗಾಗಲೇ ಮಾರ್ಚ್​ 7ರಂದು ರಸ್ತೆ ಹದಗೆಟ್ಟು ಅಪಘಾತ ಸಂಭವಿಸುತ್ತಿದೆ. ತಕ್ಷಣವೇ ದುರಸ್ತಿ ಮಾಡಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಲಿಖಿತ ದೂರು ನೀಡಿದ್ದರೂ, ಈವರೆಗೂ ಕ್ರಮ ಕೈಗೊಳ್ಳದೆ ರ್ನಿಲಕ್ಷ$್ಯ ತೋರಿದ್ದಾರೆ.

ಶಿರಾ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ಕೊಟ್ಟ ಜೆಡಿಎಸ್​ ಮುಖಂಡ ಹಾಗೂ ತುಮಲ್​ ನಿರ್ದೇಶಕ ಎಸ್​.ಆರ್​.ಗೌಡ ಮೃತ ದಂಪತಿ ಕುಟುಂಬದವರಿಗೆ ಸಾಂತ್ವನ ಹೇಳಿ, ಮೇಲ್ಸೇತುವೆ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದು, ಯಾವ ಕ್ಷಣದಲ್ಲಾದರೂ ಕುಸಿಯುವ ಸಂಭವವಿದೆ. ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಾಗುವ ಅನಾಹುತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸರ್ಕಾರ ನೇರ ಕಾರಣವಾಗುತ್ತಾರೆ ಎಂದು ಎಚ್ಚರಿಸಿದ್ದಾರೆ. ಅವೈಜ್ಞಾನಿಕವಾಗಿ ನಿಮಾರ್ಣವಾಗಿರುವ ಈ ಮೇಲ್ಸೇತುವೆಯಿಂದ ಪ್ರತಿನಿತ್ಯ ಒಂದಲ್ಲ ಒಂದು ಅವಘಡಗಳು ಸಂಭವಿಸುತ್ತಿವೆ. ರಸ್ತೆ ದುರಸ್ತಿ

ಮಾಡಿ ಸಾವು& ನೋವು ತಡೆಗೆ ಶಾಸಕರು ಮುಂದಾಗಬೇಕು ಎಂದು ಸ್ಥಳಿಯ ನಿವಾಸಿಗಳು ಒತ್ತಾಯಿಸಿದ್ದಾರೆ.

ತಪ್ಪಿತಸ್ಥರಿಗೆ ಶಿೆ ವಿಧಿಸಲಿ: ಅಪಘಾತದ ಬಗ್ಗೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್​ ಸದಸ್ಯ ಚಿದಾನಂದ್​ ಎಂ ಗೌಡ, ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರನ ಮೇಲೆ ಎ್​ಐಆರ್​ ದಾಖಲಿಸಬೇಕು. ಕಳಪೆ ಕಾಮಗಾರಿಗೆ ಶಾಮೀಲಾಗಿರುವ ಎಲ್ಲ ಅಧಿಕಾರಿಗಳನ್ನು ಅಮಾನತುಗೊಳಿಸಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಈಗಿರುವ ಮೇಲ್ಸೇತುವೆಯನ್ನುಸಂಪೂರ್ಣವಾಗಿ ದುರಸ್ತಿ ಮಾಡಲು, ಸಂಸದ ಗೋವಿಂದ ಕಾರಜೋಳ ಅವರೊಂದಿಗೆ ಚರ್ಚಿಸುವೆ ಹಾಗೂ ಕೇಂದ್ರ ಸರ್ಕಾರಕ್ಕೆ ಪತ್ರ ಮುಖೇನ ಸಮಸ್ಯೆ ತಿಳಿಸಿ ಪರಿಹರಿಸಲು ಯತ್ನಿಸುತ್ತೇನೆಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net