ಉದಯಭಾಸ್ಕರ್ ಮತ್ತೆ ಹಾಸನ ಡಿವೈಎಸ್‌ಪಿ

ಉದಯಭಾಸ್ಕರ್ ಮತ್ತೆ ಹಾಸನ ಡಿವೈಎಸ್‌ಪಿ
Published on

    ಹಾಸನ: ವಿಧಾನಸಭೆ ಚುನಾವಣೆಗೂ ಮುನ್ನ ಸ್ವಯಂ ಪ್ರೇರಿತವಾಗಿ ಬೆಂಗಳೂರಿನ ಪ್ರಧಾನ ಕಚೇರಿಗೆ ತೆರಳಿದ್ದ ಹಾಸನ ವಿಭಾಗದ ಡಿವೈಎಸ್‌ಪಿ ಜಿ.ವಿ.ಉದಯಭಾಸ್ಕರ್ ಮರಳಿ ಬಂದಿದ್ದಾರೆ. ಸ್ಥಳ ನಿರೀಕ್ಷಣೆಯಲ್ಲಿದ್ದ ಅವರನ್ನು ಮೊದಲಿದ್ದ ಸ್ಥಾನಕ್ಕೆ ವರ್ಗ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

51 ಜನ ಡಿವೈಎಸ್ಪಿ ಅಧಿಕಾರಿಗಳನ್ನ ವರ್ಗಾವಣೆ ಮಾಡಿರುವ ಸರ್ಕಾರ ಇದರಲ್ಲಿ ಚುನಾವಣೆ ಪೂರ್ವದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಆರೋಪದ ಹಿನ್ನೆಲೆಯಲ್ಲಿ ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು ಇದರಿಂದ ನೊಂದು ಡಿವೈಎಸ್‌ಪಿ ಉದಯ್ ಭಾಸ್ಕರ್ ಸ್ವಯಂ ವರ್ಗಾವಣೆಗೆ ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದರು

ಈ ಸಂದರ್ಭದಲ್ಲಿ ಅವರನ್ನ ಪ್ರಧಾನ ಕಛೇರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಇವರ ಜಾಗಕ್ಕೆ ಬಿ.ಎಸ್. ಶ್ರೀನಿವಾಸ್‌ರಾಜ್ ಅವರನ್ನು ನೇಮಿಸಲಾಗಿತ್ತು.ಇದೀಗ ವರ್ಗಾವಣೆ ಪಟ್ಟಿಯಲ್ಲಿ ಮತ್ತೆ ಉದಯ ಭಾಸ್ಕರ್ ಹಾಸನ ಉಪ ವಿಭಾಗದ ಡಿವೈಎಸ್‌ಪಿ ಆಗಿ ನೇಮಿಸಿದ್ದು, ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀನಿವಾಸ್ ರಾಜ್ ಅವರನ್ನು ಸಿಐಡಿಗೆ ವರ್ಗ ಮಾಡಲಾಗಿದೆ.

ಚುನಾವಣೆ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್‌ಗಳನ್ನೂ ಜಿಲ್ಲೆಯಿಂದ ಬೇರೆ ಬೇರೆ ಸ್ಥಳಗಳಿಗೆ ವರ್ಗವಾಗಿದ್ದಂತಹ ಪ್ರಮೋದ್ ಕುಮಾರ್ ಮಹಿಳಾ ಪೊಲೀಸ್ ಠಾಣೆ ಹಾಸನ, ವಸಂತ್ ಕೆ.ಎಂ.ಚನ್ನರಾಯಪಟ್ಟಣ ನಗರ ಠಾಣೆ, ರೇವಣ್ಣ ಹಾಸನ ನಗರ ಠಾಣೆ, ಪ್ರದೀಪ್ ಹೊಳೆನರಪುರ ರೇಖಾಭಾಯಿ ಎಂ.ಎಚ್. ಚನ್ನರಾಯಪಟ್ಟಣ ಗ್ರಾಮಾಂತರ, ಶಾಂತಿನಾಥ್ ಜೆ.ವೆಣ್ಣೂರು ಪಿ ಟಿ ಎಸ್ ಹಾಸನ, ವಿನಯ್ ಇ.ವಿ. ಡಿ ಸಿ ಆರ್ ಬಿ ಹಾಸನ, ಬಾನು ಎ.ಟಿ.ಶಾಂತಿಗ್ರಾಮ ವೃತ್ತಕ್ಕೆ ಮತ್ತೆ ಮರಳಿ ಬಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net