ಉತ್ಸವಾಂಬ ದೇವಿ ಕಣ್ತುಂಬಿಕೊಂಡ ಭಕ್ತರು

Ucchhangi Yallamma Devi
Published on

ಚಿತ್ರದುರ್ಗ: ಪಾಳೆಗಾರರ ಕುಲದೇವತೆ ಕೋಟೆ ರಸ್ತೆಯ ಉಚ್ಚಂಗಿಯಲ್ಲಮ್ಮ ದೇಗುಲದಲ್ಲಿ ಕಾರ್ತಿಕ ಮಹೋತ್ಸವ, ವಿಶೇಷ ಪೂಜಾ ಕಾರ್ಯಕ್ರಮ ಶ್ರದ್ಧಾ-ಭಕ್ತಿಯಿಂದ ಜರುಗಿತು. ದೇವಿ ಮೂರ್ತಿಗೆ ನೂರಾರು ಶಿವಲಿಂಗ ಸೇರಿ ವಿಶೇಷ ಪುಷ್ಪಾಲಂಕಾರ ಸೇವೆ ನೆರವೇರಿತು.

ಆವರಣದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಮಹಿಳೆಯರು ಬಿಡಿಸಿದ ಚಿತ್ತಾಕರ್ಷಕ ರಂಗೋಲಿಗಳು ಅನೇಕ ಭಕ್ತರ ಕಣ್ಮನ ಸೆಳೆದವು. ಸಂಜೆ ನಡೆದ ದೀಪೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಮಹಾಮಂಗಳಾರತಿ, ಪ್ರಸಾದ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net