

ಕಲಬುರಗಿ: ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಸ್ವರ್ಣ ಜಯಂತಿ ನಿಮಿತ್ತ ಹಮ್ಮಿಕೊಂಡ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸುತ್ತಿರುವ ಬಿಜೆಪಿಯೇತರ ರಾಜಕೀಯ ಮುಖಂಡರು, ಜಾತ್ಯಾತೀತ ನಿಲುವಿನ ಸ್ವಾಮೀಜಿಗಳಿಗೆ ಭಾಗವಹಿಸದಂತೆ ಕೋರಿ ಬಹಿರಂತ ಪತ್ರ ಬರೆಯುತ್ತಿರುವುದಾಗಿ ಸೌಹಾರ್ದ ಕರ್ನಾಟಕದ ಡಾ.ಮೀನಾಕ್ಷಿ ಬಾಳಿ ತಿಳಿಸಿದರು.
ಜ.೨೯ರಿಂದ ನಡೆಯುತ್ತಿರುವ ಭಾರತೀಯ ಸಂಸ್ಕೃತಿ ಉತ್ಸವದ ಆಳ, ಅಗಲ, ಅಪಾಯ ತಿಳಿಸಲು ಪ್ರಯತ್ನ ನಿರಂತರವಾಗಿ ನಡೆದಿದೆ. ಜಾತ್ಯಾತೀತ ನಿಲುವಿನ ಹಲವು ರಾಜಕಾರಣಿಗಳು, ಜನಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಉತ್ಸವದ ಉz್ದÉÃಶ ಅರಿಯದೆ ಹೋಗುವವರಿದ್ದು, ಅವರಿಗೆ ಪತ್ರದ ಮೂಲಕ ಮನವರಿಕೆ ಮಾಡಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಚಿಂದಕ ಪ್ರೊ.ಆರ್.ಕೆ.ಹುಡಗಿ ಮಾತನಾಡಿ, ಭಾರತ ಎಂಬ ಕಲ್ಪನೆ ದೂರ ಮಾಡುವ ಸಂಘಟನೆಯ ವಿರುದ್ಧ ಹೋರಾಟ ನಡೆಸುತ್ತಿದ್ದು, ಕಲ್ಯಾಣ ಕರ್ನಾಟಕದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿದೆ. ಉತ್ಸವ ಮಾಡುವವರು ವೈರಿಗಳಲ್ಲ, ಎದುರಾಳಿಗಳು. ಪ್ರಜಾಸತ್ತಾತ್ಮಕವಾಗಿ ಅವರನ್ನು ಎದುರಿಸುತ್ತೇವೆ ಎಂದರು.
ಉತ್ಸವವೂ ರಾಷ್ಟಿçÃಯ ಸರ್ವನಾಶ ಸಂಘದ ಸಿದ್ಧಾಂತಗಳನ್ನು ಅನುಷ್ಠಾನ ಮಾಡಲು ಹೊರಟಿದೆ. ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯAತ ಸಣ್ಣ ಸಂಸ್ಥೆಯ ಸುವರ್ಣ ಮಹೋತ್ಸವಕ್ಕೆ ಕೋಟ್ಯಂತರ ರೂ. ಖರ್ಚು ಮಾಡುತ್ತಿರುವುದು ಅನುಮಾನಾಸ್ಪದ ನಡೆಯಾಗಿದೆ. ಸ್ವರ್ಣ ಜಯಂತಿ ಹೆಸರಲ್ಲಿ ಜನರನ್ನು ದಾರಿ ತಪ್ಪಿಸುತ್ತಿದ್ದು, ವಿಷ ಬಿತ್ತುತ್ತಿದ್ದಾರೆ. ಜನರು ಪ್ರಜ್ಞಾವಂತರಾಗಲಿ ಎಂದು ಬಹಿರಂಗ ಪತ್ರ, ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಅಫ್ಜಲ್, ಲವಿತ್ರ ವಸ್ತçದ, ರವಿ ಸಜ್ಜನ್, ಮಾರುತಿ ಗೋಖಲೆ ಇದ್ದರು.