

ವಿಜಯವಾಣಿ ಸುದ್ದಿಜಾಲ ಧಾರವಾಡ
ಗುರುಪೂರ್ಣಿಮೆ ನಿಮಿತ್ತ ನಗರದ ಸೃಜನಾ ರಂಗಮಂದಿರದಲ್ಲಿ ಏರ್ಪಡಿಸಿದ್ದ ಸಾಕೇತ ಫೌಂಡೇಷನ್ ವಾರ್ಷಿಕ ಉತ್ಸವದಲ್ಲಿ ವಿದ್ಯಾರ್ಥಿಗಳು ಗುರುಗಳಿಗೆ ನೃತ್ಯ ವಂದನೆ ಸಲ್ಲಿಸಿದರು.
ವಿದ್ಯಾರ್ಥಿಗಳು ಪುಷ್ಪಾಂಜಲಿ, ಗಣೇಶ ಸ್ತುತಿ, ಅಲ್ಲರಿಪು, ಜತಿ ಸ್ವರ, ಗಿಲಿ ಕೌತವನ್, ಶೃಂಗ ಪುರದೇಶ್ವರಿ, ಕೃತಿ, ಗುರು ಕೌತವನ್ ಸೇರಿ ಇತರ ನೃತ್ಯಗಳನ್ನು ಮನಮೋಹಕವಾಗಿ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಅಲ್ಲದೆ ಜಾನಪದ ನೃತ್ಯ ಹಾಗೂ ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿ ಮನರಂಜನೆ ನೀಡಿದರು.
ವಿದುಷಿ ಸೀಮಾ ಕುಲಕರ್ಣಿ ನಟುವಾಂಗ ನಿರ್ವಹಿಸಿದರು. ವಾಣಿ ಉಡುಪಿ (ಗೀತಗಾಯನ), ಶಂಕರ ಕಬಾಡಿ (ವಯಲಿನ್), ಗೋಪಿಕೃಷ್ಣ (ರಿದಂ ಪ್ಯಾಡ್), ಪಂಚಮ್ ಉಪಾಧ್ಯ(ಮೃದಂಗ) ಸಾಥ್ ನೀಡಿದರು.
ಮೈಸೂರಿನ ವಿದ್ವಾನ್ ಪ್ರೊ. ರಾಮಮೂರ್ತಿ ರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅತಿಥಿಗಳಾಗಿ ಆಗಮಿಸಿದ್ದರು. ವಿದುಷಿ ಸವಿತಾ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಸಾಕೇತ ಫೌಂಡೇಷನ್ ಅಧ್ಯಕ್ಷ ಡಾ. ಕಿರಣ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.
ರಾಘವೇಂದ್ರ ಕುಕನೂರ, ಬಸವರಾಜ ಅರಳಿಮಠ, ಫೌಂಡೇಷನ್ ಸದಸ್ಯರು, ವಿದ್ಯಾರ್ಥಿಗಳ ಪಾಲಕರು, ಇತರರು ಇದ್ದರು. ರವಿ ಕುಲಕರ್ಣಿ ನಿರೂಪಿಸಿದರು.