ಉತ್ಸವಗಳಿಂದ ಸೌಹಾರ್ದ ವೃದ್ಧಿ

01
Published on

ಕೊಡೇಕಲ್ : ಎಲ್ಲರೂ ಒಟ್ಟಿಗೆ ಸೇರಿ ಆಚರಿಸುವ ಜಾತ್ರೋತ್ಸವಗಳಿಂದ ಪರಸ್ಪರ ಸಹೋದರತ್ವ ಗಟ್ಟಿಗೊಳ್ಳಲಿದೆ ಎಂದು ಬೂದಿಹಾಳದ ಶ್ರೀ ಗಾಂಗೇಯಪಿತ ಸ್ವಾಮೀಜಿ ನುಡಿದರು.

ಬಸವೇಶ್ವರ ಬಡಾವಣೆಯಲ್ಲಿ ಸರ್ವಸಿದ್ಧಿ ಯುವಕ ಮಂಡಳಿ ಬುಧವಾರ ಹಮ್ಮಿಕೊಂಡ ಗಣೇಶೋತ್ಸವದಲ್ಲಿ ಆಶೀರ್ವಚನ ನೀಡಿದ ಅವರು, ನಮ್ಮ ಪೂರ್ವಜರು ಆಚರಿಸಿಕೊಂಡು ಬಂದ ಉತ್ಸವಗಳಿಗೆ ವಿಶೇಷ ಅರ್ಥವಿದೆ. ಹಬ್ಬಗಳ ನೆಪದಲ್ಲಿ ಎಲ್ಲರೂ ಒಟ್ಟುಗೂಡುವ ಮೂಲಕ ಪರಸ್ಪರ ಸಂಬAಧಗಳು ವೃದ್ಧಿಯಾಗುತ್ತವೆ ಎಂದರು.

ಯುವಕರು ನಮ್ಮ ಸಂಸ್ಕೃತಿ ಮತ್ತು ಪರಂಪರೆ ಉಳಿಸುವ ಅಗತ್ಯವಿದೆ. ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ಜನರನ್ನು ಒಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಗಣೇಶ ಉತ್ಸವವನ್ನು ಸಾರ್ವಜನಿಕವಾಗಿ ಆಚರಿಸಲು ನಾಂದಿ ಹಾಡಿದರು ಎಂದು ಸ್ಮರಿಸಿದರು.

ಶರಣೆ ಗಿರಿಜಮ್ಮ ತಾಯಿ, ಶರಣಪ್ಪ ಧನ್ನೂರ, ಶಿವನಗೌಡ ಬಿರಾದಾರ, ಶರಣಗೌಡ ಧನ್ನೂರ, ಮಲ್ಲಿಕಾರ್ಜುನ ಹೊಕ್ರಾಣಿ, ಶರಣಗೌಡ ಪಾಟೀಲ್, ಡಾ.ವೀರೇಶ ಲಕ್ಯಾಳ, ಬಸವರಾಜ ಧನ್ನೂರ, ಪ್ರಭು ಮೇಟಿ, ಕಾಂತು ಹೂಗಾರ, ಸಂಗಮೇಶ ಧನ್ನೂರ, ಆಸೀಫ್, ಮಲ್ಲು ಮೇಟಿ, ಚಂದ್ರಶೇಖರ ಹೊಕ್ರಾಣಿ, ಭೀಮನಗೌಡ ಬಿರಾದಾರ, ಮುತ್ತಪ್ಪ ಆಶ್ಯಾಳ, ಮಲ್ಲು ವಾಲಿಕಾರ, ಶಿವಶಂಕರ ಇತರರಿದ್ದರು.

ಆರ್.ಎಸ್. ಗೌಡ ಸ್ವಾಗತಿಸಿ ವಂದಿಸಿದರು. ಅನೀಲ ಬಿರಾದಾರ ನಿರೂಪಣೆ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಮಂಡಳಿಯಿAದ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net