ಉತ್ತರಪ್ರದೇಶ ಮಾದರಿ ಆಡಳಿತ ಬೇಕಿಲ್ಲ: ಕೆ.ಸಿ.ನಾರಾಯಣಗೌಡ

Narayana gowda
Published on

ಶಿವಮೊಗ್ಗ: ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿ ಆಡಳಿತದ ಅವಶ್ಯಕತೆ ಇಲ್ಲ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡ ಹೇಳಿದರು.

ಭದ್ರಾ ಜಲಾಶಯಕ್ಕೆ ಶನಿವಾರ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಕೆಲವರು ಮಾತ್ರ ಯುಪಿ ಮಾದರಿ ಕ್ರಮ ಕೈಗೊಳ್ಳಬೇಕು ಎನ್ನುತ್ತಿದ್ದಾರೆ. ಆದರೆ ಅಲ್ಲಿನ ಮಾದರಿ ಆಡಳಿತ ನಮಗೆ ಬೇಕಿಲ್ಲ. ಇಲ್ಲಿರುವ ಕಾನೂನನ್ನು ಬಳಸಿಕೊಂಡು ಏನೇನು ಬಿಗಿ ಕ್ರಮ ಕೈಗೊಳ್ಳಬೇಕೋ ಅದರ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ಕೊಲೆಗಳು ಮೊದಲ ಬಾರಿ ಆಗಿಲ್ಲ. ಈ ಹಿಂದಿನಿಂದಲೂ ಎಲ್ಲ ಧರ್ಮದವರ ಕೊಲೆಗಳು ನಡೆಯುತ್ತಿವೆ. ಅದೇ ರೀತಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಕೊಲೆಗಳಾಗಿವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಘಟನೆಯನ್ನಿಟ್ಟುಕೊಂಡು ಪ್ರತಿಪಕ್ಷಗಳು ದೊಡ್ಡದು ಮಾಡುತ್ತಿವೆ. ಸರ್ಕಾರ ರಾಜ್ಯದಲ್ಲಿ ಶಾಂತಿ ಕಾಪಾಡಿಕೊಂಡು ಹೋಗಲು ಯತ್ನಿಸುತ್ತಿದೆ. ಅದಕ್ಕೆ ಸಹಕಾರ ನೀಡುವ ಬದಲು ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಬಿಜೆಪಿಯ ಕೆಲ ಕಾರ್ಯಕರ್ತರು ಬೇಸರದಿಂದ ರಾಜೀನಾಮೆ ನೀಡುತ್ತಿದ್ದಾರೆ. ಅದನ್ನು ನಮ್ಮ ನಾಯಕರು ಸರಿಪಡಿಸುವ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net