ಉತ್ತರ ಕನ್ನಡದಲ್ಲಿ 175ಕ್ಕೆ ಇಳಿದ ಕೋವಿಡ್ ಸೋಂಕಿನ ಸಂಖ್ಯೆ

Corona
Published on

ಕಾರವಾರ: ಮಂಗಳವಾರದ ಹೆಲ್ತ್ ಬುಲೆಟಿನ್​ನಂತೆ ಜಿಲ್ಲೆಯ 175 ಜನರಿಗೆ ಸೋಂಕು ಖಚಿತವಾಗಿದ್ದು, ಐವರು ಮೃತಪಟ್ಟಿದ್ದಾರೆ. ಸೋಮವಾರ ಜಿಲ್ಲೆಯಲ್ಲಿ 1502 ಆರ್​ಟಿ-ಪಿಸಿಆರ್ ಹಾಗೂ 1207 ರ್ಯಾಪಿಡ್ ಟೆಸ್ಟ್ ಸೇರಿ ಸೇರಿ ಒಟ್ಟು 2709 ಜನರ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಅದರಲ್ಲಿ 175 ಜನರಲ್ಲಿ ಮಾತ್ರ ಸೋಂಕು ಪತ್ತೆಯಾಗಿದ್ದು, ಪಾಸಿಟಿವಿಟಿ ಪ್ರಮಾಣ ಶೇ. 6.4 ಕ್ಕೆ ಇಳಿಕೆಯಾದಂತಾಗಿದೆ. ಕಾರವಾರದಲ್ಲಿ 18, ಅಂಕೋಲಾ- 9, ಕುಮಟಾ- 23, ಯಲ್ಲಾಪುರ, ಹೊನ್ನಾವರ ಹಾಗೂ ಭಟ್ಕಳ ತಲಾ- 16, ಶಿರಸಿ- 46, ಸಿದ್ದಾಪುರ- 1, ಮುಂಡಗೋಡ- 8, ಜೊಯಿಡಾ- 5, ದಾಂಡೇಲಿ ಹಾಗೂ ಹಳಿಯಾಳ- 17 ಜನರಲ್ಲಿ ಸೋಂಕು ಖಚಿತವಾಗಿದೆ. 537 ಜನ ಸೋಂಕಿನಿಂದ ಗುಣವಾಗಿದ್ದಾರೆ. 3,232 ಸಕ್ರಿಯ ಪ್ರಕರಣಗಳಿದ್ದು, 402 ಜನ ಆಸ್ಪತ್ರೆಗಳಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net