ಉತ್ತರ ಕನ್ನಡ ಜಿಲ್ಲಾದ್ಯಂತ ಎಡೆಬಿಡದ ವರ್ಷಧಾರೆ

16 KWR 3a
Published on

ಕಾರವಾರ: ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದೆ. ಎಡೆಬಿಡದೇ ಸುರಿಯುವ ಮಳೆಯಿಂದ ನದಿಗಳು ಉಕ್ಕಿ ಹರಿಯುತ್ತಿವೆ. ತಗ್ಗು ಪ್ರದೇಶದಲ್ಲಿ ನೀರು ತುಂಬಿದೆ.

ಕಾರವಾರದಲ್ಲಿ ಭಾರಿ ಮಳೆಯಿಂದ ಮಾಜಾಳಿಯ ಕೊಠಾರ, ಶಿರವಾಡದ ಮಕೇರಿಯಲ್ಲಿ ನೀರು ತುಂಬಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಅಸ್ನೋಟಿಯ ಕೊಳಗೆ ರೈಲ್ವೆ ಬ್ರಿಜ್ ಸಮೀಪ ಗುಡ್ಡದ ನೀರು ರಾಜ್ಯ ಹೆದ್ದಾರಿಯ ಮೇಲೆ ತುಂಬಿಕೊಂಡಿದ್ದರಿಂದ ಸಂಚಾರಕ್ಕೆ ತೊಂದರೆ ಉಂಟಾಯಿತು. ಪಕ್ಕದ ಖಾಸಗಿ ಜಮೀನಿನಲ್ಲಿ ಗುಡ್ಡವನ್ನು ಅವೈಜ್ಞಾನಿಕವಾಗಿ ಕೊರೆದಿದ್ದರಿಂದ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ಆರೊಪಿಸಿದ್ದಾರೆ. ಕಾರವಾರದ ಬಾಂಡಿಶಿಟ್ಟಾ ಎಪಿಎಂಸಿ ಆವರಣ ಸಂಪೂರ್ಣ ಜಲಾವೃತವಾಗಿದೆ.

ಮಳೆಯ ಪ್ರಮಾಣ: ಶುಕ್ರವಾರದ ವರದಿಯಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಅಂಕೋಲಾದಲ್ಲಿ 75.4 ಮಿಮೀ, ಭಟ್ಕಳ-63.4, ಹಳಿಯಾಳ- 6.2, ಹೊನ್ನಾವರ -73,ಕಾರವಾರ-80.6, ಕುಮಟಾ- 91.8, ಮುಂಡಗೋಡ -1.2, ಸಿದ್ದಾಪುರ-48.2, ಶಿರಸಿ-26.5,ಜೊಯಿಡಾ- 34, ಯಲ್ಲಾಪುರ-14.4 ಮಿಮೀ ಮಳೆಯಾಗಿದೆ. ಜಲಾಶಯಗಳಿಗೆ ಉತ್ತಮ ನೀರು ಹರಿದು ಬರುತ್ತಿದೆ. ಕದ್ರಾ ಅಣೆಕಟ್ಟೆಗೆ 17373 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 25061 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕೊಡಳ್ಳಿಗೆ 9041 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಸೂಪಾ ಜಲಾಶಯಕ್ಕೆ 21158 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net