ಉತ್ತಮ ಸೇವೆಯಿಂದ ಮನಸ್ಸಿಗೆ ಶಾಂತಿ

02-07hbd2
Published on

ಹುಮನಾಬಾದ್: ಸರ್ಕಾರಿ ಸೇವೆಯಲ್ಲಿರುವ ಪ್ರತಿಯೊಬ್ಬರೂ ತಮ್ಮ ಅವಧಿಯಲ್ಲಿ ಮಾಡಿರುವ ಕಾರ್ಯಕ್ಕೆ ತಮ್ಮ ಅಂತರಾತ್ಮಕ್ಕೆ ಶಾಂತಿ ನೀಡಿದಲ್ಲಿ ಅದು ನಿಜವಾದ ಸೇವೆಯಾಗಲಿದೆ ಎಂದು ಮಾಜಿ ಶಾಸಕ ಸುಭಾಷ ಕಲ್ಲೂರ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಜಿಪಂ ಕುಡಿಯುವ ನೀರು ಸರಬರಾಜು ಎಇಇ ರಾಚಪ್ಪ ಪಾಟೀಲ್ ಮೀನಕೇರಾ ಸೇವಾ ವಯೋನಿವೃತ್ತಿ ನಿಮಿತ್ತ ಏರ್ಪಡಿಸಿದ್ದ ಬಿಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಯಾವುದೇ ಇಲಾಖೆ ಆಗಿರಲಿ ಅಧಿಕಾರಿ ಹಾಗೂ ಸಿಬ್ಬಂದಿ ಮಾಡುವ ಸೇವೆಗೆ ಜನರಿಂದ ಮೆಚ್ಚುಗೆ ಪ್ರಾತವಾಗುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.
ವಯೋನಿವೃತ್ತ ರಾಚಪ್ಪ ಪಾಟೀಲ್ ಮಾತನಾಡಿ, ಅಭಿಯಂತರಾಗಿ ಸೇವೆಗೆ ಸೇರಿದ ನಾನು ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸಿದ್ದೆನೆ. ತಾಲೂಕಿನ ಜನರು ಮತ್ತು ಜನ ಪ್ರತಿನಿಧಿಗಳು ಉತ್ತಮ ಕೆಲಸ ಮಾಡಲು ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನಾಗಶೆಟ್ಟಿ ಡುಮಣಿ, ಪ್ರಧಾನ ಕಾರ್ಯದರ್ಶಿ ರೇವಣಸಿದ್ದಯ್ಯ ಮಠಪತಿ, ತಾಪಂ ಇಒ ವೈಜಿನಾಥ ಫೂಲೆ, ಜಿಪಂ ಎಇಇ ವಾಮನರಾವ ಜಾಧವ, ಕುಡಿಯುವ ನೀರು ಸರಬರಾಜು ಎಇಇ ದತ್ತಾತ್ರೆಯ ಮೇದಾ, ಪ್ರಮುಖರಾದ ಪ್ರಕಾಶ ಮಠಪತಿ, ಅಶೋಕ ಕಾಳಗಿ, ರಮೇಶ ಮಠಪತಿ, ಮಾಣಿಕಪ್ಪ ಗೊರನಳ್ಳೆ,ಡಾ. ಡಾ.ಗೋವಿಂದ್, ಬಾಬುರಾವ ಕುಲಾಲ್, ಬಸವಂತ ಗಂದಗೆ, ಪೀರಾಜಿ, ಸಿಬ್ಬಂದಿಗಳಾದ ಮಾಣಿಕ ನಾಗನಾಯಕ, ಅಲಿಮ್ ಜಾಮಾದಾರ, ಶಿವರಾವ ಗಡವಂತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net