

ಗೌರಿಬಿದನೂರು: ಬ್ಯಾಂಕ್‌ಗಳು ಉತ್ತಮ ಸೇವೆ ಒದಗಿಸುವ ಮೂಲಕ ಗ್ರಾಹಕರ ವಿಶ್ವಾಸ ಗಳಿಸಿದರೆ ಪ್ರಗತಿ ಸಾಧಿಸಲು ಸಾಧ್ಯ ಎಂದು ಕಾಗಿನೆಲೆ ಕನಕಗುರು ಮಹಾಸಂಸ್ಥಾನದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದರು.
ನಗರದ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಶ್ರೀ ಬೀರೇಶ್ವರ ಸೌಹಾರ್ಧ ಸಹಕಾರಿ ನಿಯಮಿತ ಬ್ಯಾಂಕ್ ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಬ್ಯಾಂಕ್‌ಗಳು ರೈತರ, ಬಡವರ, ಕಾರ್ಮಿಕರು, ಮಹಿಳೆಯರ ಪಾಲಿಗೆ ಕಾಮದೇನುವಿದ್ದಂತೆ. ಕಡಿಮೆ ಬಡ್ಡಿಗೆ ಸರಳ ರೀತಿಯಲ್ಲಿ ಸಾಲ ನೀಡುತ್ತವೆ. ಅದೇ ರೀತಿ ಸಾಲ ಪಡೆದುಕೊಂಡವರು ಸಕಾಲಕ್ಕೆ ಮರುಪಾವತಿಸುವ ಮೂಲಕ ಬ್ಯಾಂಕ್‌ಗಳ ಉಳಿವಿಗೆ ಪ್ರಗತಿಗೆ ಸಹಕರಿಸಬೇಕು ಎಂದರು.
ಸಹಕಾರಿ ಸಂಘಗಳಲ್ಲಿ ಸಾಲಸೌಲಭ್ಯ ಪಡೆದು ಆರ್ಥಿಕ ಸ್ವಾಲಂಬನೆ ಸಾಧಿಸಬೇಕು, ಇನ್ನೂ ಪದಾಧಿಕಾರಿಗಳು ಯಾವುದೇ ಕಾರಣಕ್ಕೂ ಅವವ್ಯಹಾರಕ್ಕೆ ಆಸ್ಪದ ನೀಡಬಾರದು ಎಂದು ಎಚ್ಚರಿಸಿದರು. ಕುರುಬ ಸಮುದಾಯ ಹಿಂದುಳಿದಿದ್ದು ಸಮಾಜದ ಎಲ್ಲ ರಂಗದಲ್ಲೂ ಪ್ರಗತಿ ಹೊಂದಬೇಕು, ಮುಖಂಡರು ಮನಸ್ಥಾಪ ಬಿಟ್ಟು ಸಮುದಾಯದ ಅಭಿವೃದ್ಧಿಗೆ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕಿವಿಮಾತು ಹೇಳಿದರು.
ಸಾಲ ತೆಗೆದುಕೊಳ್ಳುವ ವೇಳೆಯ ಉತ್ಸಾಹವನ್ನು ಮರು ಪಾವತಿಯಲ್ಲಿಯೂ ತೋರಬೇಕು ಎಂದು ಬ್ಯಾಂಕ್‌ನ ಅಧ್ಯಕ್ಷ ಬಿ.ಲಿಂಗಪ್ಪ ತಿಳಿಸಿದರು.
ಬ್ಯಾಂಕ್ ನಿದೇಶಕರಾದ ಜಿಲಾಕುಂಟೆ ಗಂಗಪ್ಪ, ಕೆಇಬಿ ಗಂಗಾಧರಪ್ಪ. ಲಿಂಗಣ್ಣ, ತಾಪಂ ಮಾಜಿ ಅಧ್ಯಕ್ಷ ವೆಂಕಟೇಶ್, ಅಶ್ವತ್ಥಮ್ಮ ಚಂದ್ರಣ್ಣ, ಜಿಲಾಕುಂಟೆ ಸಂಜೀವರಾಯಪ್ಪ, ಕೃಷ್ಣಪ್ಪ, ಮಹೇದಶ್ವರ ದೇವಾಲಯದ ಅಧ್ಯಕ್ಷ ಪಿ.ವಿ.ರಾಜಣ್ಣ, ವಕೀಲರಾದ ಗಂಗಸಂದ್ರ ಸತೀಶ್, ಶ್ರೀನಿವಾಸ್, ನಳಿನಿ.ಅರ್., ಶಿಲ್ಪಾ ಲಿಂಗಪ್ಪ, ಶೃತಿ ಮಲ್ಲಿಕಾರ್ಜುನ, ಸುವರ್ಣಮ್ಮ ಗಂಗರಾಜು ಇತರರಿದ್ದರು.