ಉತ್ತಮ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ

ydg05
Published on

ಕೊಡೇಕಲ್: ಸಾರಿಗೆ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದು ಬಿಎಂಟಿಸಿಯಲ್ಲಿ ನಿಯಂತ್ರಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಅಶೋಕ ಬಂಟನುರ ಹೇಳಿದರು.

ಗ್ರಾಮದ ಕಾಳಿಕಾ ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಂಡ ಗೆಳೆಯರ ಬಳಗದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದವನಾದ ನಾನು ಸಾರಿಗೆ ಇಲಾಖೆಯಲ್ಲಿ ಸೇವೆಗೆ ಸೇರಿದ ಸಂದರ್ಭದಲ್ಲಿ ಇಲಾಖೆ ಮೇಲಧಿಕಾರಿಗಳು ನೀಡಿದ ಮಾರ್ಗದರ್ಶನದಿಂದ ೩೨ ವರ್ಷಗಳ ಕಾಲ ಸೇವೆ ಸಲ್ಲಿಸಲು ಸಾಧ್ಯವಾಯಿತು. ಸಮುದಾಯದ ನಡುವೆ ಕರ‍್ಯನಿರ್ವಹಿಸುವುದು ಸುಲಭದ ಮಾತಲ್ಲ, ಸಂಯಮ, ತಾಳ್ಮೆ, ಪ್ರಾಮಾಣಿಕತೆ ಅಳವಡಿಸಿಕೊಂಡು ಹೋದರೆ ಮಾತ್ರ ವೃತ್ತಿಯಲ್ಲಿ ಯಾವುದೇ ಅಡೆತಡೆಗಳು ಬರುವ ಮಾತೆ ಇಲ್ಲ ಎಂದು ಹೇಳಿದರು.

ಕಸಾಪ ವಲಯ ಅಧ್ಯಕ್ಷ ಕೋರಿಸಂಗಯ್ಯ ಗಡ್ಡದ ಮಾತನಾಡಿದರು. ಬಸವರಾಜ ಹೊಸಪೂಜಾರಿ, ಸಂಗಯ್ಯ ಬಾಚಿಹಾಳ, ಸಂಗನಬಸಪ್ಪ ಅಡ್ಡಿ, ಕಾಳಪ್ಪ ಕಂಚಗಾರ, ಆದಪ್ಪ ತೋಟಗೇರ, ಅಂಬರೀಶ ಬಂಟನೂರ, ಸಂಗಯ್ಯ ಪೂಜಾರಿ, ಪ್ರಭು ಗುಮ್ತೆ, ಅನಿಲಕುಮಾರ ಕಂಚಗಾರ ಇತರರಿದ್ದರು. ಸಂಗಯ್ಯ ಸ್ವಾಗತಿಸಿ ವಂದಿಸಿದರು. ಕೆ.ಬಿ.ಗಡ್ಡದ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net