

ಕೆಂಭಾವಿ : ಗ್ರಾಮೀಣ ಭಾಗದ ಜನತೆಗೆ ವೈದ್ಯರು ಉತ್ತಮ ಆರೋಗ್ಯ ಸೇವೆ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗರೀಮಾ ಪನ್ವಾರ್ ತಾಕೀತು ಮಾಡಿದರು.
ಸಮೀಪದ ಮಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಆಸ್ಪತ್ರೆ ವ್ಯವಸ್ಥೆ ಪರಿಶೀಲಿಸಿದ ಅವರು, ಸಿಬ್ಬಂದಿ ಆಸ್ಪತ್ರೆಯ ಅಲಮಾರದಲ್ಲಿ ಕೆಂಪು ರಕ್ತ ಕಣ ಹೆಚ್ಚಿಸುವ ಮತ್ತು ಪೌಷ್ಟಿಕತೆಗೆ ಸಹಕಾರಿಯಾದ ಔಷಧಿ ಸಮರ್ಪಕವಾಗಿ ವಿತರಿಸದೆ ಹಾಗೆಯೇ ಸಂಗ್ರಹಿಸಿಟ್ಟಿದ್ದನ್ನು ಕಂಡು ವೈದ್ಯರಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ಒಳ್ಳೆಯ ಸತ್ವವುಳ್ಳ ಔಷಧಿ ಮಕ್ಕಳಿಗೆ ಏಕೆ ವಿತರಿಸಿಲ್ಲ? ಎಂದು ಸ್ಥಳದಲ್ಲಿದ್ದ ವೈದ್ಯರನ್ನು ಪ್ರಶ್ನಿಸಿದಾಗ, ಸಮಂಜಸ ಉತ್ತರ ನೀಡದೇ ನುಣಿಚಿಕೊಳ್ಳುವ ಪ್ರಯತ್ನ ಮಾಡಿದರು. ಇದಕ್ಕೆ ಸಿಇಒ ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ಡಾ.ಅವಿನಾಶ, ಡಾ.ಸಿದ್ರಾಮೇಶ, ಸಿಬ್ಬಂದಿ ಭೀಮರಾಯ, ಮಲ್ಲನಗೌಡ ಬಿರಾದಾರ, ಸಂಗೀತ, ಶಿವಶರಣರೆಡ್ಡಿ ಇತರರಿದ್ದರು.