ಉತ್ತಮ ಸೇವೆ ಕಲ್ಪಿಸುವ ಆಶಯ

17BK1
Published on

ಬಸವಕಲ್ಯಾಣ: ಸಾರ್ವಜನಿಕರಿಗೆ ಉತ್ತಮ ಸೇವೆ ಕಲ್ಪಿಸುವುದೇ ಅಂಚೆ ಕಚೇರಿ ಮೂಲ ಆಶಯ ಎಂದು ಜಿಲ್ಲಾ ಅಂಚೆ ಅಧೀಕ್ಷಕ ಶ್ರೀಕರ ಬಾಬು ಹೇಳಿದರು.
ಸಸ್ತಾಪುರ ಬಂಗ್ಲಾದಲ್ಲಿ ಶುಕ್ರವಾರ ಅಂಚೆ ಕಚೇರಿಯ ನೂತನ ಶಾಖೆ ಉದ್ಘಾಟಿಸಿ ಮಾತನಾಡಿ, ಅಂಚೆ ಕಚೇರಿ ಡಿಜಿಟಲೀಕರಣ ಮಾಡಲಾಗಿದೆ.

ಬ್ಯಾಂಕಿಂಗ್ ಸೇರಿ ಹಲವು ಸೌಲಭ್ಯ ಕಲ್ಪಿಸಲಾಗುತ್ತದೆ. ಮಗುವಿನಿಂದ ಹಿರಿಯ ನಾಗರಿಕರವರೆಗಿನ ಹಲವು ಉಳಿತಾಯ ಯೋಜನೆಗಳಿವೆ. ಅಂಚೆ ಕಚೇರಿಗೆ ಭೇಟಿ ನೀಡಿ ತಿಳಿದು, ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಅಗ್ನಿ ಶಾಮಕ ಠಾಣೆ ಪ್ರಭಾರಿ ಠಾಣಾಧಿಕಾರಿ ಪ್ರವೀಣಕುಮಾರ, ಸರ್ಕಾರಿ ಐಟಿಐ ಪ್ರಾಚಾರ್ಯ ಆಶೀಫ್ ಮಾತನಾಡಿ, ಅಂಚೆ ಕಚೇರಿ ನೂತನ ಶಾಖೆಯಿಂದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ಹುಮನಾಬಾದ್ ಅಂಚೆ ನಿರೀಕ್ಷಕ ಕಿರಣಕುಮಾರ ಜಾಧವ್, ಪೋಸ್ಟ್ ಮಾಸ್ಟರ್ ವಿಜಯಕುಮಾರ ಬನಗುಂಡಿ, ಪ್ರಮುಖರಾದ ಉದ್ಯಮಿ ಚನ್ನವೀರ, ಘಾಳೆಪ್ಪ ಕೆ, ಉಮೇಶ ಧೋನಿ, ಮಂಜುನಾಥ, ದಶರಥ ಇತರರಿದ್ದರು. ಭರತ ವಾಘಮಾರೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net