

ಕೊಡೇಕಲ್: ವಿಶ್ವದ ಗಮನಸೆಳೆದ ಮಹರ್ಷಿ ವಾಲ್ಮೀಕಿ ಸಂದೇಶಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿವೆ ಎಂದು ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಸನಗೌಡ ಮಾಲಿಪಾಟೀಲ ಹೇಳಿದರು.
ತೀರ್ಥ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಒಂದೇ ಸಮಾಜಕ್ಕೆ ಸಿಮೀತರಾದವರಲ್ಲ. ಮಹಾಕಾವ್ಯ ರಾಮಾಯಣ ಬರೆಯುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದ ಮೇರು ಪುರುಷ ವಾಲ್ಮೀಕಿ ಎಂದು ಬಣ್ಣಿಸಿದರು.
ಭಾರತೀಯ ಸಂಸ್ಕೃತಿ ಹಾಗೂ ಜೀವನ ಪದ್ಧತಿಯನ್ನು ಪ್ರತಿಬಿಂಬಿಸುವ ರಾಮಾಯಣ ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು, ವಾಲ್ಮೀಕಿ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಜನರು ಒಗ್ಗಟ್ಟಾಗಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭೀಮನಗೌಡ ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಾಲ್ಮೀಕಿ ಸಂಘದ ಗ್ರಾಮ ಘಟಕ ಅಧ್ಯಕ್ಷ ರವಿ ಮಾಲಿಪಾಟೀಲ, ಪ್ರಮುಖರಾದ ಭೀಮನಗೌಡ ಪಾಟೀಲ, ಭೀಮನಗೌಡ ಮನ್ಯಾಳ, ತಿರುಪತಿ ಬಡಿಗೇರ, ಷಣ್ಮುಖಪ್ಪಗೌಡ ಪೊಲೀಸ್ ಪಾಟೀಲ, ದೇವರಾಜ ಪೊಲೀಸ್ ಪಾಟೀಲ, ನಿಂಗಣ್ಣ ಮೇಲಿನಮನಿ, ಬಸವರಾಜ ಕಾಮನಟಗಿ, ರಮೇಶ ಬಿರಾದಾರ, ಹಣಮಗೌಡ ಮೆಲಿನಮನಿ, ಚನ್ನಪ್ಪ ಬಡಿಗೇರ ಇದ್ದರು.
ಇದಕ್ಕೂ ಮುನ್ನ ವಾಲ್ಮೀಕಿ ವೃತ್ತದಲ್ಲಿ ಧ್ವಜಾರೋಹಣ ನೆರವೇರಿಸಿ ನಾಮಫಲಕ ಹಾಗೂ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಹುಣಸಗಿ ತಾಲೂಕು ವಾಲ್ಮೀಕಿ ಸಂಘ ಹಾಗೂ ಗ್ರಾಮ ಘಟಕದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ನಂತರ ಸಾಂಸ್ಕೃತಿಕ ಕರ‍್ಯಕ್ರಮಗಳು ಜರುಗಿದವು.