ಉತ್ತಮ ಸಮಾಜಕ್ಕಾಗಿ ಯೂಥ್ ಫೌಂಡೇಷನ್

5CKD5
ಬಾರವಾಡ ಗ್ರಾಮದಲ್ಲಿ ಬಸವ ಜ್ಯೋತಿ ಯೂಥ್ ಫೌಂಡೇಷನ್ ಶಾಖೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಪಾಲ್ಗೊಂಡಿದ್ದರು. ಪವನ ಪಾಟೀಲ, ರಾಜು ಭದ್ರಗಡೆ ಇದ್ದರು.
Published on

ಚಿಕ್ಕೋಡಿ: ಯುವಕರ ಏಳಿಗೆಯ ಜತೆಗೆ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಬಸವ ಜ್ಯೋತಿ ಯೂಥ್ ಫೌಂಡೇಷನ್ ಸ್ಥಾಪಿಸಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ಬಸವ ಪ್ರಸಾದ ಜೊಲ್ಲೆ ಹೇಳಿದರು. ನಿಪ್ಪಾಣಿ ತಾಲೂಕಿನ ಬಾರವಾಡ ಗ್ರಾಮದಲ್ಲಿ ಫೌಂಡೇಷನ್ ಶಾಖೆ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಲು ಸಂಸ್ಥೆ ತೆರೆಯಲಾಗಿದೆ. ಎಲ್ಲರೂ ಸದುಪಯೋಗ ಪಡೆಯಬೇಕು ಎಂದರು. ಬಿಜೆಪಿ ಗ್ರಾಮೀಣ ಅಧ್ಯಕ್ಷ ಪವನ ಪಾಟೀಲ, ರಾಜು ಭದ್ರಗಡೆ, ಸಂಜು ದೇಸಾಯಿ, ಯಶವಂತ ಜಾಧವ, ನಜರುದ್ದಿನ್ ಮುಲ್ಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net